Asianet Suvarna News Asianet Suvarna News

ರವಿಶಾಸ್ತ್ರಿಗೆ ಚಾಟಿ ಬೀಸಿದ ಸಿಒಎ

ಸೋಮವಾರವಷ್ಟೇ, ಬಿಸಿಸಿಐ ಶೀಘ್ರ ಕೊಹ್ಲಿ-ಶಾಸ್ತ್ರಿಗೆ ಬಿಸಿ ಮುಟ್ಟಿಸಲಿದೆ ಎನ್ನುವ ವರದಿಗಳು ಪ್ರಕಟಗೊಂಡಿದ್ದವು. ತಂಡಕ್ಕೆ ಸಕಲ ಸೌಕರ್ಯಗಳನ್ನು ಒದಗಿಸಿದ ಹೊರತಾಗಿಯೂ, ಕಳಪೆ ಪ್ರದರ್ಶನ ನೀಡುತ್ತಿರುವುದನ್ನುಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಸಂದೇಶ ಸುಪ್ರೀಂ ನೇಮಿತ ಬಿಸಿಸಿಐ ಆಡಳಿತ ಸಮಿತಿ ಶಾಸ್ತ್ರಿಗೆ ರವಾನಿಸಿದೆ ಎನ್ನಲಾಗಿದೆ.

India vs England CoA to Ravi Shastri Batting slump unacceptable
Author
New Delhi, First Published Aug 15, 2018, 4:51 PM IST

ನವದೆಹಲಿ[ಆ.15]: ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್‌ಗಳಲ್ಲಿ ಭಾರತ ತಂಡ ಹೀನಾಯ ಸೋಲು ಅನುಭವಿಸಿದ್ದೇ ಬಂತು, ತಂಡವನ್ನು ಪ್ರತಿಯೊಬ್ಬರು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದಾರೆ. ಸೋಲಿನ ನೇರ ಪರಿಣಾಮ ಕೋಚ್ ರವಿ ಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಮೇಲೆ ಬೀರುತ್ತಿದೆ. 

ಸೋಮವಾರವಷ್ಟೇ, ಬಿಸಿಸಿಐ ಶೀಘ್ರ ಕೊಹ್ಲಿ-ಶಾಸ್ತ್ರಿಗೆ ಬಿಸಿ ಮುಟ್ಟಿಸಲಿದೆ ಎನ್ನುವ ವರದಿಗಳು ಪ್ರಕಟಗೊಂಡಿದ್ದವು. ತಂಡಕ್ಕೆ ಸಕಲ ಸೌಕರ್ಯಗಳನ್ನು ಒದಗಿಸಿದ ಹೊರತಾಗಿಯೂ, ಕಳಪೆ ಪ್ರದರ್ಶನ ನೀಡುತ್ತಿರುವುದನ್ನುಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಸಂದೇಶ ಸುಪ್ರೀಂ ನೇಮಿತ ಬಿಸಿಸಿಐ ಆಡಳಿತ ಸಮಿತಿ ಶಾಸ್ತ್ರಿಗೆ ರವಾನಿಸಿದೆ ಎನ್ನಲಾಗಿದೆ.

‘ಮುಂಚಿತವಾಗಿಯೇ ತಂಡವನ್ನು ಇಂಗ್ಲೆಂಡ್‌ಗೆ ಕಳುಹಿಸಲಾಗಿತ್ತು. ಅಭ್ಯಾಸಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಹೋರಾಟ ತೋರದೆ ತಂಡ ಸೋಲುತ್ತಿರುವುದನ್ನು ನೋಡಲು ಸಾಧ್ಯವಿಲ್ಲ. ಈ ಬಗ್ಗೆ ನಿಮ್ಮೊಂದಿಗೆ ಚರ್ಚೆ ನಡೆಸಬೇಕಿದೆ’ ಎಂದು ಆಡಳಿತ ಸಮಿತಿ ಶಾಸ್ತ್ರಿಗೆ ತಿಳಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

Follow Us:
Download App:
  • android
  • ios