ಭಾರತ ಹಾಗೂ ಚೀನಾ ಮತ್ತೆ ಮುಖಾಮುಖಿಯಾಗುತ್ತಿದೆ. ಈ ಬಾರಿ ಫುಟ್ಬಾಲ್ ಮೈದಾನದಲ್ಲಿ ಅನ್ನೋದು ವಿಶೇಷ. ಕಾರಣ ದಶಕಗಳ ಬಳಿಕ ಭಾರತ ಹಾಗೂ ಚೀನಾ ಫುಟ್ಬಾಲ್ ಪಂದ್ಯ ಆಡುತ್ತಿದೆ. ಇಲ್ಲಿದೆ ಈ ಮಹತ್ವದ ಪಂದ್ಯದ ಮಾಹಿತಿ.
ಸುಝೌ (ಅ.13): 21 ವರ್ಷಗಳ ಬಳಿಕ ಭಾರತ ಹಾಗೂ ಚೀನಾ ಫುಟ್ಬಾಲ್ ತಂಡಗಳು ಶನಿವಾರ ಮುಖಾಮುಖಿಯಾಗಲಿವೆ. ಇದೇ ಮೊದಲ ಬಾರಿಗೆ ಭಾರತ ತಂಡ ಚೀನಾದಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದೆ.
ಉಭಯ ತಂಡಗಳು ಈ ವರೆಗೂ 17 ಬಾರಿ ಮುಖಾಮುಖಿಯಾಗಿದ್ದು ಚೀನಾ 12ರಲ್ಲಿ ಗೆದ್ದಿದೆ. 5 ಪಂದ್ಯಗಳು ಡ್ರಾಗೊಂಡಿವೆ. ಭಾರತ-ಚೀನಾ ಕೊನೆ ಬಾರಿಗೆ ಮುಖಾಮುಖಿಯಾಗಿದ್ದು 1997ರ ನೆಹರೂ ಕಪ್ ಪಂದ್ಯದಲ್ಲಿ. ಕೊಚ್ಚಿಯಲ್ಲಿ ನಡೆದಿದ್ದ ಈ ಪಂದ್ಯವನ್ನು ಚೀನಾ 2-1ರಲ್ಲಿ ಗೆದ್ದುಕೊಂಡಿತ್ತು.
2019ರ ಜನವರಿಯಲ್ಲಿ ನಡೆಯಲಿರುವ ಎಎಫ್‌ಸಿ ಏಷ್ಯನ್ ಕಪ್‌ಗೆ ಪೂರ್ವಭಾವಿ ತಯಾರಿಗಾಗಿ ಈ ಪಂದ್ಯ ಆಯೋಜಿಸಲಾಗಿದೆ. ಫಿಫಾ ರಾರಯಂಕಿಂಗ್‌ನಲ್ಲಿ ಚೀನಾ 76ನೇ ಸ್ಥಾನದಲ್ಲಿದ್ದರೆ, ಭಾರತ 97ನೇ ಸ್ಥಾನದಲ್ಲಿದೆ.
