ಮಹಿಳಾ ಏಷ್ಯಾಕಪ್: ಬಾಂಗ್ಲಾಗೆ ಸುಲಭ ಗುರಿ ನೀಡಿದ ಭಾರತ

First Published 10, Jun 2018, 1:51 PM IST
India vs Bangladesh -Poonam removes Bangladesh openers
Highlights

ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾರತ ತಂಡ ಆರಂಭದಿಂದಲೇ ಕುಂಟುತ್ತಾ ಸಾಗಿತು. ತಂಡದ ಮೊತ್ತ 32 ರನ್’ಗಳಾಗುವಷ್ಟರಲ್ಲಿ ಪ್ರಮುಖ 4 ಆಟಗಾರ್ತಿಯರು ಪೆವಿಲಿಯನ್ ಸೇರಿದ್ದರು

ಕೌಲಲಾಂಪುರ[ಜೂ.10]: ಹರ್ಮನ್’ಪ್ರೀತ್ ಕೌರ್[56] ಏಕಾಂಗಿ ಹೋರಾಟದ ನಡುವೆಯೂ ಬಾಂಗ್ಲಾ ಬೌಲರ್’ಗಳ ಶಿಸ್ತಿನ ದಾಳಿಯ ನೆರವಿನಿಂದ ಭಾರತ ವನಿತೆಯರ ತಂಡವನ್ನು ಕೇವಲ 112ರನ್’ಗಳಿಗೆ ನಿಯಂತ್ರಿಸಿದೆ. ಇನ್ನು ಸುಲಭ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಉತ್ತಮ ಆರಂಭ ಪಡೆಯಿತಾದರೂ ಒಂದೇ ಓವರ್’ನಲ್ಲಿ ಬಾಂಗ್ಲಾ ಆರಂಭಿಕ ಬಲಿ ಪಡೆದ ಪೂನಂ ಯಾದವ್ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟಿದ್ದಾರೆ. 7 ಓವರ್ ಮುಕ್ತಾಯದ ವೇಳೆಗೆ ಬಾಂಗ್ಲಾ 35 ರನ್’ಗಳಿಗೆ 2 ವಿಕೆಟ್ ಕಳೆದುಕೊಂಡಿದೆ

ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾರತ ತಂಡ ಆರಂಭದಿಂದಲೇ ಕುಂಟುತ್ತಾ ಸಾಗಿತು. ತಂಡದ ಮೊತ್ತ 32 ರನ್’ಗಳಾಗುವಷ್ಟರಲ್ಲಿ ಪ್ರಮುಖ 4 ಆಟಗಾರ್ತಿಯರು ಪೆವಿಲಿಯನ್ ಸೇರಿದ್ದರು.

ಹರ್ಮನ್’ಪ್ರೀತ್ ಕೌರ್[56] ಏಕಾಂಗಿ ಹೋರಾಟ ನೆರವಿನಿಂದ ತಂಡವನ್ನು 112 ಗೌರವಾನ್ವಿತ ಮೊತ್ತ ಕಲೆಹಾಕುವಲ್ಲಿ ನೆರವಾಯಿತು. ಬಾಂಗ್ಲಾ ಪರ ಖದೀಜಾ ಹಾಗೂ ರುಮಾನ 2 ವಿಕೆಟ್ ಪಡೆದರೆ, ಜಹನರಾ ಮತ್ತು ಸಲ್ಮಾ ತಲಾ ಒಂದೊಂದು ವಿಕೆಟ್ ಪಡೆದರು.

loader