ಆಡಿಲೇಡ್(ಡಿ.10): ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 31 ರನ್ ಗೆಲುವು ಸಾಧಿಸಿದೆ. ಗೆಲುವಿನ ಪ್ರಮುಖ ರೂವಾರಿ ಚೇತೇಶ್ವರ್ ಪೂಜಾರ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ್ರು. ಈ ದಿನ ನನ್ನ ತಂದೆ ಹೆಮ್ಮೆ ಪಡುತ್ತಾರೆ. ನನ್ನ ಎಲ್ಲಾ ಯಶಸ್ಸು ಅವರಿಗೆ ಸಲ್ಲಬೇಕು ಎಂದು ಪೂಜಾರ ಹೇಳಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಪೂಜಾರ, 8 ವರ್ಷ ವಯಸ್ಸಿನಿಂದ ನನಗೆ ತಂದೆ ಅಭ್ಯಾಸ ಮಾಡಿಸಿದ್ದಾರೆ. ನನ್ನ ಕ್ರಿಕೆಟ್ ಮೇಲೆ ತಂದೆ ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ನನ್ನ ತಪ್ಪುಗಳನ್ನ ಸರಿಪಡಿಸುತ್ತಿದ್ದರು. ಈ ದಿನ ತಂದೆ ಹೆಚ್ಚು ಖುಷಿ ಪಡುತ್ತಾರೆ ಎಂದು ಪೂಜಾರ ಹೇಳಿದ್ದಾರೆ.

ಆಡಿಲೇಡ್ ಟೆಸ್ಟ್‌ನ ಮೊದಲ ಪಂದ್ಯದಲ್ಲಿ 123 ರನ್ ಸಿಡಿಸಿದ ಪೂಜಾರ ದ್ವಿತೀಯ ಇನ್ನಿಂಗ್ಸ್‌ನಲ್ಲಿ 71ರನ್ ಸಿಡಿಸಿದ್ದರು. ಈ ಮೂಲಕ ಭಾರತದ ಗೆಲುವಿನ ರೂವಾರಿಯಾದರು. ಆಸಿಸ್ ಕಂಡೀಷನ್‌ನಲ್ಲಿ ಪೂಜಾರ ಸಾಧನೆಗೆ ಮಾಜಿ ಹಾಗೂ ದಿಗ್ಗಜ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.