ಸಿಡ್ನಿ(ಜ.08): ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಇದೀಗ ಏಕದಿನ ಸರಣಿಯತ್ತ ಚಿತ್ತ ಹರಿಸಿದೆ. 3 ಏಕದಿನ ಪಂದ್ಯಗಳ ಸರಣಿ ಜನವರಿ 12 ರಿಂದ ಆರಂಭಗೊಳ್ಳಲಿದೆ. ಇದಕ್ಕಾಗಿ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಜನವರಿ 8 ಮತ್ತು 9 ಭಾರತ್‌ ಬಂದ್‌: ಏನಿರುತ್ತೆ, ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ

ಸುದೀರ್ಘ ವಿಶ್ರಾಂತಿಯಲ್ಲಿದ್ದ ಎಂ.ಎಸ್.ಧೋನಿ ಇದೀಗ ಮತ್ತೆ ಟೀಂ ಇಂಡಿಯಾಗೆ ವಾಪಾಸ್ಸಾಗಿದ್ದಾರೆ. ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ದದ ಟಿ20  ಸರಣಿಯಿಂದ ಹೊರಗುಳಿದಿದ್ದ ಧೋನಿ, ಆಸಿಸ್ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಥಾನ ಪಡೆದಿದ್ದರು. ಈಗಾಗಲೇ ಕಾಂಗರೂ ನಾಡಿಗೆ ತೆರಳಿರುವ ಧೋನಿ ತಂಡ ಸೇರಿಕೊಂಡಿದ್ದಾರೆ.

ಇದನ್ನೂ ಓದಿ: ಐತಿಹಾಸಿಕ ಗೆಲುವಿನ ಬಳಿಕ ಅಭಿಮಾನಿಗಳ ಜೊತೆ ಕೊಹ್ಲಿ ಡ್ಯಾನ್ಸ್!

ತಂದೆಯಾಗಿ ಬಡ್ತಿ ಪಡೆದ ಕಾರಣ ಟೆಸ್ಟ್ ಸರಣಿಯನ್ನ ಮೊಟಕುಗೊಳಿಸಿ ತವರಿಗೆ ವಾಪಾಸ್ಸಾದ ರೋಹಿತ್ ಶರ್ಮಾ ಇದೀಗ ಏಕದಿನ ಸರಣಿಗಾಗಿ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೆ ಡಿಸೆಂಬರ್ 30 ರಂದು ಹೆಣ್ಣು ಮುಗುವಿಗೆ ಜನ್ಮ ನೀಡಿದ್ದರು. ಹೀಗಾಗಿ ಸಿಡ್ನಿ ಟೆಸ್ಟ್ ಪಂದ್ಯ ಮಿಸ್ ಮಾಡಿಕೊಂಡ ತವರಿಗೆ ಮರಳಿದ್ದರು.