ಸಿಡ್ನಿ(ಜ.07): ಆಸ್ಟ್ರೇಲಿಯಾ ವಿರುದ್ಧದ  ಟೆಸ್ಟ್ ಸರಣಿಯನ್ನ 2-1 ಅಂತರದಿಂದ ಗೆದ್ದ ಟೀಂ ಇಂಡಿಯಾ  ಇತಿಹಾಸ ನಿರ್ಮಿಸಿದೆ. ಗೆಲುವಿನ ಬಳಿಕ ಶುರುವಾದ ಸಂಭ್ರಮಾಚರಣೆ ಇನ್ನು ನಿಂತಿಲ್ಲ. ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳ ಜೊತೆ ಹೆಜ್ಜೆ ಹಾಕಿದ್ದಾರೆ. ಈ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

ಇದನ್ನೂ ಓದಿ: ಭಾರತ್ ಬಂದ್ : ಪೆಟ್ರೋಲ್, ಡೀಸೆಲ್ ಸಿಗುತ್ತಾ..?

ಆಸ್ಟ್ರೇಲಿಯಾದಲ್ಲಿರುವ ಭಾರತ್ ಆರ್ಮಿ ಕ್ರಿಕೆಟ್ ಅಭಿಮಾನಿ ಬಳಗದ ಜೊತೆ ವಿರಾಟ್ ಕೊಹ್ಲಿ ಹೆಜ್ಜೆ ಹಾಕಿದ್ದಾರೆ. ಮೇರೆ ದೇಶ್ ಕಿ ಧರ್ತಿ ಅನ್ನೋ ಪ್ರಖ್ಯಾತ ಹಾಡಿಗೆ ಕೊಹ್ಲಿ ಡ್ಯಾನ್ಸ್ ಮಾಡಿದ್ದಾರೆ.  ವಿಶೇಷ ಅಂದರೆ ಕೊಹ್ಲಿ ಕೂಡ ದೇಶ್ ಕೀ ಧರ್ತಿ ಹಾಡನ್ನ ಹಾಡೋ ಮೂಲಕ ಡ್ಯಾನ್ಸ್ ಮಾಡಿದ್ದಾರೆ.

 

 

ಇದನ್ನೂ ಓದಿ: ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಗೆ ಪ್ರಧಾನಿ ಮೋದಿ ಅಭಿನಂದನೆ!

ಆಸ್ಟ್ರೇಲಿಯಾ ವಿರುದ್ಧದ 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಇದೇ ಮೊದಲ ಭಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಟೆಸ್ಟ್ ಸರಣಿ ಗೆಲುವಿನ ಸಾಧನೆ ಮಾಡಿದೆ.