ಸಿಡ್ನಿ(ಮೇ.09): ಕ್ರಿಕೆಟ್‌ ಆಸ್ಪ್ರೇಲಿಯಾ ಹಾಗೂ ಬಿಸಿಸಿಐ ನಡುವಿನ ಏಕದಿನ ಸರಣಿ ಬಿಕ್ಕಟ್ಟು ಶಮನಗೊಂಡಿದೆ. ಬಿಸಿಸಿಐ ಒತ್ತಡಕ್ಕೆ ಮಣಿದಿರುವ ಕ್ರಿಕೆಟ್‌ ಆಸ್ಪ್ರೇಲಿಯಾ, 2020ರ ಜನವರಿಯಲ್ಲಿ 3 ಏಕದಿನ ಪಂದ್ಯಗಳ ಸರಣಿಗಾಗಿ ಆಸೀಸ್‌ ತಂಡವನ್ನು ಭಾರತಕ್ಕೆ ಕಳುಹಿಸಲು ಒಪ್ಪಿಗೆ ಸೂಚಿಸಿದೆ. ಮಂಗಳವಾರ ಕ್ರಿಕೆಟ್‌ ಆಸ್ಪ್ರೇಲಿಯಾ 2019-2020ರ ವೇಳಾಪಟ್ಟಿಯನ್ನು ತನ್ನ ಅಧಿಕೃತ  ವೆಬ್‌ಸೈಟ್‌ನಲ್ಲಿ ಪ್ರಕಟಿಸಿತು. 

ಇದನ್ನೂ ಓದಿ: ವಿಶ್ವಕಪ್ 2019: ಕ್ರಿಕೆಟಿಗರ ಜೊತೆ ಪತ್ನಿಯರ ಪ್ರವಾಸ- ಬಿಸಿಸಿಐನಿಂದ ಮಹತ್ವ ನಿರ್ಧಾರ!

ಭಾರತ ಪ್ರವಾಸದಿಂದಾಗಿ ತವರಿನಲ್ಲಿ ನಡೆಯಬೇಕಿದ್ದ ಚಾಪೆಲ್‌-ಹ್ಯಾಡ್ಲಿ ಸರಣಿಯನ್ನು ಮಾರ್ಚ್‌ಗೆ ಮುಂದೂಡುವ ಅನಿವಾರ್ಯತೆಗೆ ಕ್ರಿಕೆಟ್‌ ಆಸ್ಪ್ರೇಲಿಯಾ ಸಿಲುಕಿದೆ. ಭಾರತ ಪ್ರವಾಸ ಕೈಗೊಳ್ಳದಿದ್ದರೆ ಕೋಟ್ಯಂತರ ರುಪಾಯಿ ನಷ್ಟ ಅನುಭವಿಸಬೇಕಾದೀತು ಎಂದು ಬಿಸಿಸಿಐ, ಕ್ರಿಕೆಟ್‌ ಆಸ್ಪ್ರೇಲಿಯಾಗೆ ಎಚ್ಚರಿಸಿತ್ತು.