ಬೆಂಗಳೂರಿನಲ್ಲಿ ಇಂದು ಕ್ರಿಕೆಟ್ ಹಬ್ಬ. ಭಾರತ-ಆಸ್ಟ್ರೇಲಿಯಾ 4ನೇ ಯುದ್ಧದಲ್ಲಿ ಮುಖಾಮುಖಿಯಾಗ್ತಿವೆ. ಒಂದು ಕಡೆ ಹ್ಯಾಟ್ರಿಕ್ ಜಯ ಸಾಧಿಸಿ ಸರಣಿ ಗೆದ್ದಿರುವ ಟೀಂ ಇಂಡಿಯಾ, ಜಯದ ನಾಗಲೋಟ ಮುಂದುವರಿಸಿಕೊಂಡು ಹೋಗಲು ಎದುರುನೋಡುತ್ತಿದೆ. ಮೊದಲ ಮೂರು ಪಂದ್ಯದಲ್ಲೂ ಒಂದೇ ತಂಡವನ್ನ ಕಣಕ್ಕಿಳಿಸಿದ್ದ ಕೊಹ್ಲಿ, ಇಂದು
ಬೆಂಗಳೂರು(ಸೆ.28): ಬೆಂಗಳೂರಿನಲ್ಲಿ ಇಂದು ಕ್ರಿಕೆಟ್ ಹಬ್ಬ. ಭಾರತ-ಆಸ್ಟ್ರೇಲಿಯಾ 4ನೇ ಯುದ್ಧದಲ್ಲಿ ಮುಖಾಮುಖಿಯಾಗ್ತಿವೆ. ಒಂದು ಕಡೆ ಹ್ಯಾಟ್ರಿಕ್ ಜಯ ಸಾಧಿಸಿ ಸರಣಿ ಗೆದ್ದಿರುವ ಟೀಂ ಇಂಡಿಯಾ, ಜಯದ ನಾಗಲೋಟ ಮುಂದುವರಿಸಿಕೊಂಡು ಹೋಗಲು ಎದುರುನೋಡುತ್ತಿದೆ. ಮೊದಲ ಮೂರು ಪಂದ್ಯದಲ್ಲೂ ಒಂದೇ ತಂಡವನ್ನ ಕಣಕ್ಕಿಳಿಸಿದ್ದ ಕೊಹ್ಲಿ, ಇಂದು
ಇನ್ನು ಬೆಂಗಳೂರಿನಲ್ಲಿ ಉಭಯ ತಂಡಗಳು 6 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ನಾಲ್ಕರಲ್ಲಿ ಭಾರತ ಗೆದ್ದಿದ್ದರೆ, ಆಸೀಸ್ ಒಂನ್ನು ಗೆದ್ದಿದೆ. ಇನ್ನೊಂದು ಮಳೆಯಿಂದ ರದ್ದಾಗಿದೆ. 2013ರಲ್ಲಿ ಭಾರತ-ಆಸೀಸ್ ಏಕದಿನ ಪಂದ್ಯದ ನಂತರ ಬೆಂಗಳೂರಲ್ಲಿ ಏಕದಿನ ಪಂದ್ಯ ನಡೆಯುತ್ತಿರುವುದು ಇವತ್ತೇ.
4 ವರ್ಷಗಳ ನಂತರ ಮತ್ತೆ ಅದೇ ಎರಡು ಟೀಮ್ಸ್ ಮುಖಾಮುಖಿಯಾಗ್ತಿವೆ.
ಇನ್ನೊಂದು ವಿಶೇಷ ಅಂದ್ರೆ ಸಬ್'ಏರ್ ಸೌಲಭ್ಯ ಅಳವಡಿಸಿದ ನಂತರ ನಡೆಯುತ್ತಿರುವ ಮೊದಲ ಏಕದಿನ ಪಂದ್ಯ ಇದಾಗಿದೆ. ಇಂದಿನ ಪಂದ್ಯದ ಎಲ್ಲ ಟಿಕೆಟ್ಗಳು ಸೋಲ್ಡ್ ಔಟ್ ಆಗಿದ್ದು, ಮೈದಾನ ಹೌಸ್ಫುಲ್ ಆಗಲಿದೆ. ಚಿನ್ನಸ್ವಾಮಿ ಸ್ಟೇಡಿಯಂ ಪಿಚ್ ಬ್ಯಾಟಿಂಗ್ ಸ್ನೇಹಿ. ಇದರಿಂದ ರನ್ ಹೊಳೆ ಹರಿಯುವ ನಿರೀಕ್ಷೆ ಇದೆ.
