ಬೆಂಗಳೂರು(ಜೂನ್.14): ಭಾರತ ಹಾಗೂ ಅಫ್ಘಾನಿಸ್ತಾನ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ಭಾರತದ ಬ್ಯಾಟಿಂಗ್ ಜೊತೆಗೆ ಮಳೆರಾಯನ ಆರ್ಭಟವೂ ಹೆಚ್ಚಾಗಿದೆ. ಮಳೆಯಿಂದಾಗಿ ಭಾರತ ದಿಢೀರ್ 2 ವಿಕೆಟ್ ಕಳೆದುಕೊಂಡಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಧವನ್ 107 ರನ್ ಸಿಡಿಸಿದರೆ, ಮುರಳಿ ವಿಜಯ್ 105 ರನ್ ಬಾರಿಸಿ ಔಟಾದರು.

ಮುರಳಿ ವಿಜಯ್‌ಗೆ ಉತ್ತಮ  ಸಾಥ್ ನೀಡಿದ ಕನ್ನಡಿಗ ಕೆಎಲ್ ರಾಹುಲ್ ಅರ್ಧಶತ ಸಿಡಿಸಿ ಪೆವಿಲಿಯನ್ ಸೇರಿದರು. ರಾಹುಲ್ 54 ರನ್ ಸಿಡಿಸಿ ಯಮಿನ್ ಅಹಮ್ಮದ್ಜೈಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಯಮೀನ್ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ 2 ವಿಕೆಟ್ ಕಬಳಿಸಿ ಮಿಂಚಿದರು. ಸದ್ಯ ಚೇತೇಶ್ವರ್ ಪೂಜಾರ ಹಾಗೂ ನಾಯಕ ಅಜಿಂಕ್ಯ ರಹಾನೆ ಎಚ್ಚರಿಕೆಯ ಆಟಕ್ಕೆ ಮುಂದಾಗಿದ್ದಾರೆ.