ಮುಂಬೈ(ಆ.20): ಬಾಂಗ್ಲಾದೇಶ ವಿರುದ್ಧದ ಅಂಡರ್ -23 ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಸೆಪ್ಟೆಂಬರ್ 19 ರಿಂದ 27ರ ವರೆಗೆ ನಡೆಯಲಿರುವ 5 ಏಕದಿನ ಪಂದ್ಯಕ್ಕೆ ಭಾರತ ಕಿರಿಯರ ತಂಡವನ್ನು ಪ್ರಕಟಿಸಲಾಗಿದ್ದು, ಪ್ರಿಯಾಮ್ ಗರ್ಗ್‌ ನಾಯಕನಾಗಿ ಆಯ್ಕೆಯಾಗಿದ್ದಾರೆ. ವಿಶೇಷ ಅಂದರೆ  ಕರ್ನಾಟಕದ ಪ್ರತಿಭಾನ್ವಿತ ಕ್ರಿಕೆಟಿಗರಾದ ಶುಭಾಂಗ್ ಹೆಗ್ಡೆ ಹಾಗೂ ಬಿಆರ್ ಶರತ್  ಅಂಡರ್ 23 ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಕ್ಯಾಪ್ಟನ್ ನಾಪತ್ತೆ: ಟೂರ್ನಿ ಆಡಲು ಆಟಗಾರರೇ ಇಲ್ಲ..!

ಭಾರತ ಅಂಡರ್ -23 ತಂಡ
ಪ್ರಿಯಾಮ್ ಗರ್ಗ್(ನಾಯಕ), ಯಶಸ್ವಿ ಜೈಸ್ವಾಲ್, ಮಾಧವ್ ಕೌಶಿಕ್, ಬಿಆರ್ ಶರತ್(ವಿಕೆಟ್ ಕೀಪರ್), ಸಮರ್ಥ್ ವ್ಯಾಸ್, ಆರ್ಯನ್ ಜಯಲ್(ವಿಕೆಟ್ ಕೀಪರ್), ರಿತ್ವಿಕ್ ರಾಯ್ ಚೌಧರಿ, ಕುಮಾರ್ ಸೂರಜ್, ಆತೀಥ್ ಸೇಥ್, ಶುಭಾಂಗ್ ಹೆಗ್ಡೆ, ಹೃತೀಕ್ ಶೊಕೀನ್, ದ್ರುಶಾಂತ್ ಸೋನಿ, ಅರ್ಶದೀಪ್ ಸಿಂಗ್, ಕಾರ್ಕಿತ್ ತ್ಯಾಗಿ, ಹರ್ಪೀತ್ ಬ್ರಾರ್

ಇದನ್ನೂ ಓದಿ: ಭಾರತ ‘ಎ’ ತಂಡಕ್ಕೆ ಮನೀಶ್‌ ಪಾಂಡೆ ನಾಯಕ

ಭಾರತ-ಭಾಂಗ್ಲಾದೇಶ ಏಕದಿನ ಸರಣಿ
ಸೆ.19 - 1ನೇ ಏಕದಿನ : ರಾಯ್‌ಪುರ
ಸೆ.21 - 2ನೇ ಏಕದಿನ  : ರಾಯ್‌ಪುರ
ಸೆ.23 - 3ನೇ ಏಕದಿನ : ರಾಯ್‌ಪುರ
ಸೆ.25 - 4ನೇ ಏಕದಿನ : ರಾಯ್‌ಪುರ
ಸೆ.27 - 5ನೇ ಏಕದಿನ : ರಾಯ್‌ಪುರ