ಟೀಂ ಇಂಡಿಯಾ ವರ್ಷಾಂತ್ಯದಲ್ಲಿ ಆಸೀಸ್ ಪ್ರವಾಸ

India Tour of Australia 2018 19 India to play 3 T20Is 4 Tests and 3 ODIs
Highlights

ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಭಾಗಿಯಾಗಿ ಒಂದು ವರ್ಷದ ಶಿಕ್ಷೆಗೆ ಗುರಿಯಾಗಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಈ ಸರಣಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. 

ಸಿಡ್ನಿ[ಮೇ.01]: ಈ ವರ್ಷಾಂತ್ಯದಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, 3 ಟಿ20, 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳ ಸರಣಿಯನ್ನಾಡಲಿದೆ. ಟೀಂ ಇಂಡಿಯಾ ಸುಮಾರು 2 ತಿಂಗಳ ದೀರ್ಘಪ್ರವಾಸವನ್ನು ಕೈಗೊಳ್ಳಲಿದೆ.
ಸರಣಿಗಳ ವೇಳಾಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ್ದು, ನ.21ರಿಂದ 25ರ ವರೆಗೂ ಟಿ20 ಸರಣಿ ನಡೆದರೆ, ಡಿ.6-10 ಅಡಿಲೇಡ್‌’ನಲ್ಲಿ ಮೊದಲ ಟೆಸ್ಟ್, ಡಿ.14-18 ಪರ್ತ್‌ನಲ್ಲಿ 2ನೇ ಟೆಸ್ಟ್, ಡಿ.26-30 ಮೆಲ್ಬರ್ನ್‌’ನಲ್ಲಿ 3ನೇ ಟೆಸ್ಟ್, ಜ.3-7 ಸಿಡ್ನಿಯಲ್ಲಿ 4ನೇ ಟೆಸ್ಟ್ ನಡೆಯಲಿದೆ. ಟೆಸ್ಟ್ ಸರಣಿ ಬಳಿಕ ಜ.12-18ರವರೆಗೂ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಭಾಗಿಯಾಗಿ ಒಂದು ವರ್ಷದ ಶಿಕ್ಷೆಗೆ ಗುರಿಯಾಗಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಈ ಸರಣಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ 9 ತಿಂಗಳು ಶಿಕ್ಷೆಗೆ ಗುರಿಯಾಗಿರುವ ಕ್ಯಾಮರೋನ್ ಬೆನ್’ಕ್ರಾಫ್ಟ್ ಏಕದಿನ ಸರಣಿಗೆ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ.
ಇಂಡೀ-ಆಸ್ಟ್ರೇಲಿಯಾ ವೇಳಾಪಟ್ಟಿ ಹೀಗಿದೆ:
ಟಿ20 ಸರಣಿ:
ನವೆಂಬರ್: 21 - ಮೊದಲ ಟಿ20 ಪಂದ್ಯ- ಗಾಬಾ
ನವೆಂಬರ್: 23 - ಎರಡನೇ ಟಿ20 ಪಂದ್ಯ- ಎಂಸಿಜಿ
ನವೆಂಬರ್: 25 - ಮೂರನೇ ಟಿ20 ಪಂದ್ಯ- ಎಸ್’ಸಿಜಿ
ಟೆಸ್ಟ್ ಸರಣಿ:
ಡಿಸೆಂಬರ್: 6-10 - ಮೊದಲ ಟೆಸ್ಟ್ - ಅಡಿಲೇಡ್
ಡಿಸೆಂಬರ್: 14-18 - ಎರಡನೇ ಟೆಸ್ಟ್ - ಪರ್ತ್
ಡಿಸೆಂಬರ್: 26-30 - ಮೂರನೇ ಟೆಸ್ಟ್ - ಎಂಸಿಜಿ
ಜನವರಿ: 03-07 - ನಾಲ್ಕನೇ ಟೆಸ್ಟ್ - ಎಸ್’ಸಿಜಿ
ಏಕದಿನ ಸರಣಿ:
ಜನವರಿ 12: ಮೊದಲ ಪಂದ್ಯ- ಎಸ್’ಸಿಜಿ
ಜನವರಿ 15: ಎರಡನೇ ಪಂದ್ಯ- ಅಡಿಲೇಡ್ 
ಜನವರಿ 18: ಮೂರನೇ ಪಂದ್ಯ- ಎಂಸಿಜಿ

loader