Asianet Suvarna News Asianet Suvarna News

ಜಕರ್ತಾ ಏಷ್ಯನ್ ಗೇಮ್ಸ್‌ಗೆ ಭಾರತೀಯ ಕ್ರೀಡಾಪಟುಗಳ ಲಿಸ್ಟ್ ಪ್ರಕಟ

2018ರ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಭಾರತೀಯ ಕ್ರೀಡಾಪಟುಗಳ ಅಂತಿಮ ಪಟ್ಟಿ ಪ್ರಕಟಗೊಂಡಿದೆ. ಭಾರತೀಯ ಒಲಿಂಪಿಕ್ ಸಂಸ್ಥೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಏಷ್ಟು ಕ್ರೀಡಾಪಟುಗಳು ಸ್ಥಾನ ಪಡೆದಿದ್ದಾರೆ. ಇದರಲ್ಲಿ ಪುರುಷರೆಷ್ಟು? ಮಹಿಳೆಯರೆಷ್ಟು? ಇಲ್ಲಿದೆ ವಿವರ.

India to send 524 athletes for Asian Games 2018

ನವದೆಹಲಿ(ಜು.03): ಜಕರ್ತಾ ಏಷ್ಯನ್ ಗೇಮ್ಸ್‌ಗೆ ಭಾರತ  ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ನವದೆಹಲ್ಲಿಂದು 2018ರ ಏಷ್ಯನ್ ಗೇಮ್ಸ್‌ಗೆ ತೆರಳೋ ಭಾರತೀಯ ಕ್ರೀಡಾಪಟುಗಳ ಪಟ್ಟಿಯನ್ನ ಭಾರತೀಯ ಒಲಿಂಪಿಕ್ ಸಂಸ್ಥೆ(ಐಓಎ) ಬಿಡುಗಡೆ ಮಾಡಿದೆ. ಈ ಬಾರಿ 524 ಕ್ರೀಡಾಪಟುಗಳು ಏಷ್ಯನ್ ಗೇಮ್ಸ್ ಕೂಟದಲ್ಲಿ ಭಾರತವನ್ನ ಪ್ರತನಿಧಿಸಲಿದ್ದಾರೆ.

ಇಂಡೋನೇಷಿಯಾದ ಜಕರ್ತಾದಲ್ಲಿ ಆಗಸ್ಟ್ 18 ರಿಂದ ಸೆಪ್ಟೆಂಬರ್ 2ರ ವರೆಗೆ ಏಷ್ಯನ್ ಗೇಮ್ಸ್ ಕ್ರೀಡಾಕೂಟ ನಡೆಯಲಿದೆ. ಇದಕ್ಕಾಗಿ ಭಾರತ 277 ಪುರುಷ ಹಾಗೂ 247 ಮಹಿಳಾ ಕ್ರೀಡಾಪಟುಗಳನ್ನ ಐಒಎ ಆಯ್ಕೆ ಮಾಡಿದೆ. 2014ರ ಇಂಚಿಯೋನ್ ಏಷನ್ ಗೇಮ್ಸ್‌ಗೆ ಭಾರತ 541 ಕ್ರೀಡಾಪಟುಗಳನ್ನ ಕಳುಹಿಸಿತ್ತು.

ಭಾರತದ ಓಟ್ಟು 524 ಕ್ರೀಡಾಪಟುಗಳು 36 ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ. 2020ರ ಟೋಕಿಯೋ ಒಲಿಂಪಿಕ್ಸ್ ದೃಷ್ಠಿಯಿಂದ ಕ್ರೀಡಾಪಟುಗಳನ್ನ ಆಯ್ಕೆ ಮಾಡಲಾಗಿದೆ. ಒಲಿಂಪಿಕ್ಸ್‌ಗಾಗಿ ಈಗಿನಿಂದಲೇ ಭಾರತೀಯ ಕ್ರೀಡಾಪಟುಗಳ ತಯಾರಿ ಆರಂಭಗೊಂಡಿದೆ. ಇದೀಗ ಏಷ್ಯನ್ ಗೇಮ್ಸ್ ಕೂಡ ಸಹಕಾರಿಯಾಗಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಮುಖ್ಯ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.
 

Follow Us:
Download App:
  • android
  • ios