ಜುಲೈನಲ್ಲಿ ಮುಕ್ತಾಯವಾದ ವಿಶ್ವಕಪ್ ಫೈನಲ್ ಸೋಲಿನ ಬಳಿಕ ಭಾರತದ ವನಿತೆಯರ ತಂಡ ಇದುವರೆಗೂ ಏಕದಿನ ಪಂದಯವನ್ನಾಡಿಲ್ಲ.

ನವದೆಹಲಿ(ಡಿ.23): ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ 2018ರ ಮಾರ್ಚ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದು, ಐಸಿಸಿ ಮಹಿಳಾ ಚಾಂಪಿಯನ್’ಶಿಪ್ (2017-2020)ನ ಭಾಗವಾಗಿ ಆತಿಥೇಯ ಭಾರತದ ವಿರುದ್ಧ 3 ಏಕದಿನ ಪಂದ್ಯಗಳ ಸರಣಿಯನ್ನಾಡಲಿದೆ.

ಈ ಸರಣಿ ಬಳಿಕ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಒಳಗೊಂಡಂತೆ ಭಾರತ ತಂಡ ತ್ರಿಕೋನ ಟಿ20 ಸರಣಿಯಲ್ಲಿ ಭಾಗವಹಿಸಲಿದೆ. ಭಾರತ- ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯಗಳು ಮಾ.12ರಿಂದ 18ರ ತನಕ ಬರೋಡಾದಲ್ಲಿ ನಡೆದರೆ, ತ್ರಿಕೋನ ಟಿ20 ಸರಣಿ ಮಾ.22ರಿಂದ ಏ.3ರ ವರೆಗೂ ಮುಂಬೈನಲ್ಲಿ ನಡೆಯಲಿದೆ.

ಜುಲೈನಲ್ಲಿ ಮುಕ್ತಾಯವಾದ ವಿಶ್ವಕಪ್ ಫೈನಲ್ ಸೋಲಿನ ಬಳಿಕ ಭಾರತದ ವನಿತೆಯರ ತಂಡ ಇದುವರೆಗೂ ಏಕದಿನ ಪಂದಯವನ್ನಾಡಿಲ್ಲ.