ಏಷ್ಯನ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಕಂಚಿಗೆ ತೃಪ್ತಿಪಟ್ಟುಕೊಂಡಿದ್ದ ಭಾರತ ಇದೀಗ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಕೂಟದಲ್ಲಿ ಚಾಂಪಿಯನ್ ಆಗೋ ವಿಶ್ವಾಸದಲ್ಲಿದೆ. ಇಂದಿನಿಂದ ಪ್ರತಿಷ್ಠಿತ ಕ್ರೀಡಾಕೂಟ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಭಾರತಕ್ಕೆ ಎದುರಾಳಿ ಯಾರು? ಇಲ್ಲಿದೆ ಮಾಹಿತಿ.

ಮಸ್ಕಟ್‌(ಅ.18): ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಗೆ ಗುರುವಾರ ಇಲ್ಲಿ ಚಾಲನೆ ದೊರೆಯಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಭಾರತ ಆತಿಥೇಯ ಒಮಾನ್‌ ವಿರುದ್ಧ ಸೆಣಸಲಿದೆ. ಭಾರತ ಹಾಕಿ ತಂಡ ಶುಭಾರಂಭದ ವಿಶ್ವಾಸದಲ್ಲಿದೆ.

ಏಷ್ಯನ್‌ ಗೇಮ್ಸ್‌ ಸೆಮೀಸ್‌ನಲ್ಲಿ ಮಲೇಷ್ಯಾ ವಿರುದ್ಧ ಸೋತು ಕಂಚಿಗೆ ತೃಪ್ತಿಪಟ್ಟಿದ್ದ ಭಾರತಕ್ಕೆ, ವಿಶ್ವಕಪ್‌ಗೂ ಮುನ್ನ ಲಯ ಕಂಡುಕೊಳ್ಳಲು ಈ ಟೂರ್ನಿ ನೆರವಾಗಲಿದೆ. ಭಾರತ ಸೇರಿ ಪಂದ್ಯಾವಳಿಯಲ್ಲಿ ಒಟ್ಟು 6 ತಂಡಗಳು ಪಾಲ್ಗೊಳ್ಳಲಿವೆ. 

ಮನ್‌ಪ್ರೀತ್‌ ಸಿಂಗ್‌ ನೇತೃತ್ವದ ತಂಡ ಅ.20ಕ್ಕೆ ಪಾಕಿಸ್ತಾನ, ಅ.21ಕ್ಕೆ ಜಪಾನ್‌, ಅ.23ಕ್ಕೆ ಮಲೇಷ್ಯಾ ಹಾಗೂ ಅ.24ಕ್ಕೆ ದ.ಕೊರಿಯಾ ವಿರುದ್ಧ ಸೆಣಸಲಿದೆ. ಭಾರತ 2011, 2016ರಲ್ಲಿ ಚಾಂಪಿಯನ್‌ ಆಗಿತ್ತು.