ಚೀನಾ ವಿರುದ್ಧ ಭಾರತ 9-0 ಗೋಲುಗಳಿಂದ ಭರ್ಜರಿ ಗೆಲುವು ಪಡೆದಿದೆ. 4 ಪಂದ್ಯಗಳಿಂದ 10 ಅಂಕ ಪಡೆದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಭಾರತ ತಂಡವು ಎಂಟರ ಹಂತಕ್ಕೇರುವುದು ಖಚಿತವಾಗಿದೆ.
ಮಲೇಷ್ಯಾ(ಅ. 25): ಭಾರತ ಹಾಕಿ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಕ್ವಾರ್ಟರ್'ಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದೆ. ಇಂದು ನಡೆದ ರೌಂಡ್ ರಾಬಿನ್ ಲೀಗ್'ನ ತನ್ನ 4ನೇ ಪಂದ್ಯದಲ್ಲಿ ಚೀನಾ ವಿರುದ್ಧ ಭಾರತ 9-0 ಗೋಲುಗಳಿಂದ ಭರ್ಜರಿ ಗೆಲುವು ಪಡೆದಿದೆ. 4 ಪಂದ್ಯಗಳಿಂದ 10 ಅಂಕ ಪಡೆದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಭಾರತ ತಂಡವು ಎಂಟರ ಹಂತಕ್ಕೇರುವುದು ಖಚಿತವಾಗಿದೆ.
ಇಲ್ಲಿಯ ಕ್ವಾಂಟಾನ್ ನಗರದಲ್ಲಿ ಇಂದು ನಡೆದ ಪಂದ್ಯದಲ್ಲಿ ಆಕಾಶ್'ದೀಪ್ ಸಿಂಗ್, ಜಸ್ಜೀತ್ ಸಿಂಗ್ ಕುಲಾರ್ ಮತ್ತು ಯೂಸುಫ್ ಅಫಾನ್ ಅವರು ತಲಾ ಎರಡೆರಡು ಗೋಲು ಗಳಿಸಿದರು. ತಿಮ್ಮಯ್ಯ, ಲಲಿತ್ ಉಪಾಧ್ಯಾಯ್ ಮತ್ತು ರೂಪಿಂದರ್ ಪಾಲ್ ಸಿಂಗ್ ತಲಾ ಒಂದೊಂದು ಗೋಲು ಗಳಿಸಿದರು. ಕೊನೆಯ ಕ್ವಾರ್ಟರ್ ಹೊರತುಪಡಿಸಿದರೆ ಚೀನಾ ತಂಡ ಈ ಪಂದ್ಯದ ಯಾವ ಹಂತದಲ್ಲೂ ಪ್ರತಿರೋಧ ತೋರಲು ವಿಫಲವಾಯಿತು. ಈ ಸೋಲಿನೊಂದಿಗೆ ಚೀನಾದ ಕ್ವಾರ್ಟರ್'ಫೈನಲ್ ಆಸೆ ಇನ್ನಷ್ಟು ಕ್ಷೀಣಿಸಿದೆ.
ಇನ್ನು, ಭಾರತ ತಂಡಕ್ಕೆ ಈ ರೌಂಡ್'ರಾಬಿನ್ ಲೀಗ್'ನಲ್ಲಿ ಕೊನೆಯ ಪಂದ್ಯ ಬಾಕಿ ಇದೆ. ಸೆ. 26, ಅಂದರೆ ನಾಳೆ ಆತಿಥೇಯ ಮಲೇಷ್ಯಾ ತಂಡವನ್ನು ಭಾರತ ಎದುರುಗೊಳ್ಳಲಿದೆ. ಆ ಪಂದ್ಯದಲ್ಲಿ ಗೆದ್ದವರು ಅಗ್ರಸ್ಥಾನದೊಂದಿಗೆ ಕ್ವಾರ್ಟರ್'ಫೈನಲ್ ಪ್ರವೇಶಿಸಲಿದ್ದಾರೆ.
