ತಂಡದ ಆಯ್ಕೆಯಲ್ಲಿ ಐಪಿಎಲ್ ಟೂರ್ನಿಯ ಯಾವುದೇ ಪ್ರಭಾವ ಬೀರಿಲ್ಲದಿರುವುದು ಸ್ಪಷ್ಟವಾಗಿದೆ. ರಿಶಬ್ ಪಂತ್, ರಾಬಿನ್ ಉತ್ತಪ್ಪ, ಗೌತಮ್ ಗಂಭೀರ್, ಸಂಜು ಸ್ಯಾಮ್ಸನ್ ಮೊದಲಾದ ಆಟಗಾರರು ಐಪಿಎಲ್'ನಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ಆದರೆ, ಐಪಿಎಲ್ ಆಟಕ್ಕೆ ಬಿಸಿಸಿಐ ಮಣೆಹಾಕಿದಂತಿಲ್ಲ.

ನವದೆಹಲಿ: ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 15 ಆಟಗಾರರ ತಂಡವನ್ನು ಘೋಷಿಸಲಾಗಿದೆ. ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ್ದ ತಂಡದಲ್ಲಿ ಒಂದೆರಡು ಬದಲಾವಣೆಯಷ್ಟೇ ಆಗಿದೆ. ಗಾಯಾಳು ಕೆಎಲ್ ರಾಹುಲ್ ಬದಲು ಶಿಖರ್ ಧವನ್ ಅವರಿಗೆ ಅವಕಾಶ ಕೊಡಲಾಗಿದೆ. ಇನ್ನು, ವೇಗದ ಬೌಲರ್ ಮೊಹಮ್ಮದ್ ಶಮಿ 2 ವರ್ಷಗಳ ನಂತರ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದಾರೆ. ಕನ್ನಡಿಗ ಮನೀಶ್ ಪಾಂಡೆ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.

ತಂಡದ ಆಯ್ಕೆಯಲ್ಲಿ ಐಪಿಎಲ್ ಟೂರ್ನಿಯ ಯಾವುದೇ ಪ್ರಭಾವ ಬೀರಿಲ್ಲದಿರುವುದು ಸ್ಪಷ್ಟವಾಗಿದೆ. ರಿಶಬ್ ಪಂತ್, ರಾಬಿನ್ ಉತ್ತಪ್ಪ, ಗೌತಮ್ ಗಂಭೀರ್, ಸಂಜು ಸ್ಯಾಮ್ಸನ್ ಮೊದಲಾದ ಆಟಗಾರರು ಐಪಿಎಲ್'ನಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ಆದರೆ, ಐಪಿಎಲ್ ಆಟಕ್ಕೆ ಬಿಸಿಸಿಐ ಮಣೆಹಾಕಿದಂತಿಲ್ಲ.

ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಬ್ರಿಟನ್'ನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ಸ್ ಎನಿಸಿರುವ ಟೀಮ್ ಇಂಡಿಯಾ ಜೂನ್ 4ರಂದು ಎಡ್ಗ್'ಬಾಸ್ಟನ್'ನಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ ಆಡಲಿದೆ.

ಟೀಮ್ ಇಂಡಿಯಾ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಯುವರಾಜ್ ಸಿಂಗ್, ಕೇದಾರ್ ಜಾಧವ್, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಜಸ್'ಪ್ರೀತ್ ಬುಮ್ರಾ, ಉಮೇಶ್ ಯಾದವ್, ಭುವನೇಶ್ವರ್ ಯಾದವ್, ಮನೀಶ್ ಪಾಂಡೆ, ಮೊಹಮ್ಮದ್ ಶಮಿ