ನವದೆಹಲಿ(ಸೆ.20): ಮುಂದಿನ ವರ್ಷ ನಡೆಯಲಿರುವ ಡೇವಿಸ್ ಕಪ್ ಏಷ್ಯಾ ಒಷೇನಿಯಾ ಗ್ರೂಪ್ 1 ಹಂತದ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡಕ್ಕೆ ದ್ವಿತೀಯ ಶ್ರೇಯಾಂಕ ಸಿಕ್ಕಿದೆ.
ಈ ವಿಭಾಗದಲ್ಲಿ ಚೀನಾ, ಚೈನೀಸ್ ತೈಪೆ, ಕೊರಿಯಾ ರಿಪಬ್ಲಿಕ್, ನ್ಯೂಜಿಲೆಂಡ್ ಹಾಗೂ ಉಜ್ಬೇಕಿಸ್ತಾನ ತಂಡಗಳಿವೆ. ಟೂರ್ನಿಯ ಡ್ರಾಗಳು ಬಿಡುಗಡೆಯಾದರೆ ಭಾರತವು ನ್ಯೂಜಿಲೆಂಡ್ ಅಥವಾ ಉಜ್ಬೇಕಿಸ್ತಾನ ತಂಡಗಳ ವಿರುದ್ಧ ಸೆಣಸಬೇಕಿರುತ್ತದೆ. ಆನಂತರ, ಮತ್ತೊಂದು ಗುಂಪಿನ ತಂಡದೊಡನೆ ಮತ್ತೊಂದು ಸುತ್ತಿನಲ್ಲಿ ಸೆಣಸಬೇಕಿರುತ್ತದೆ.
ಇವುಗಳಲ್ಲಿ ಒಂದು ಮುಖಾಮುಖಿ ಎದುರಾಳಿಯ ನೆಲದಲ್ಲಿ ನಡೆಯಲಿದ್ದು, ಮತ್ತೊಂದು ಮುಖಾಮುಖಿ ಭಾರತದಲ್ಲೇ ನಡೆಯಲಿದೆ. ಶೀಘ್ರದಲ್ಲೇ ಲಂಡನ್ನಲ್ಲಿ ಟೂರ್ನಿಯ ಡ್ರಾ ಪ್ರಕಟಗೊಳ್ಳಲಿವೆ.
