‘ನಮ್ಮಿಂದ ಈ ಮಟ್ಟದ ಪ್ರದರ್ಶನವನ್ನು ಭಾರತ ನಿರೀಕ್ಷಿಸಿರಲಿಲ್ಲ. ಆಘಾತಕೊಳಗಾಗಿರುವ ವಿರಾಟ್ ಪಡೆ, ಗೆಲ್ಲಲು ಇತರೆ ದಾರಿಗಳನ್ನು ಹುಡುಕುತ್ತಿದೆ’ ಎಂದು ಸ್ಟಾರ್ಕ್ ಟೀಕಿಸಿದ್ದಾರೆ.

ಸಿಡ್ನಿ(ಮಾ.22): ಪುಣೆಯಲ್ಲಿ ಅನಿರೀಕ್ಷಿತ ಸೋಲು ಬಳಿಕ ಭಾರತ ತಂಡ ಸರಣಿ ಕಳೆದುಕೊಳ್ಳುವ ಭೀತಿಯಿಂದಾಗಿ ಅನಗತ್ಯ ಮಾತಿನ ಚಕಮಕಿಗಳನ್ನು ನಡೆಸುತ್ತಿದೆ ಎಂದು ಗಾಯಗೊಂಡು ಸರಣಿಯಿಂದ ಹೊರಬಿದ್ದ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ.

‘ನಮ್ಮಿಂದ ಈ ಮಟ್ಟದ ಪ್ರದರ್ಶನವನ್ನು ಭಾರತ ನಿರೀಕ್ಷಿಸಿರಲಿಲ್ಲ. ಆಘಾತಕೊಳಗಾಗಿರುವ ವಿರಾಟ್ ಪಡೆ, ಗೆಲ್ಲಲು ಇತರೆ ದಾರಿಗಳನ್ನು ಹುಡುಕುತ್ತಿದೆ’ ಎಂದು ಸ್ಟಾರ್ಕ್ ಟೀಕಿಸಿದ್ದಾರೆ.

ಬೆಂಗಳೂರು ಟೆಸ್ಟ್ ವೇಳೆ ಗಾಯಗೊಂಡು ತವರಿಗೆ ಮರಳಿರುವ ಸ್ಟಾರ್ಕ್, ಜೂನ್'ನಲ್ಲಿ ಇಂಗ್ಲೆಂಡ್'ನಲ್ಲಿ ಜರುಗಲಿರುವ ಚಾಂಪಿಯನ್ಸ್ ಟ್ರೋಫಿಯ ವೇಳೆಗೆ ತಂಡಕ್ಕೆ ಕಮ್'ಬ್ಯಾಕ್ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.