ನಿಮ್ಮಿಂದ ದೇಶದ ಕ್ರೀಡಾ ಪರಾಕ್ರಮ ವಿಶ್ವವೇ ನೋಡಿದೆ: ಸಾನಿಯಾ ಮಿರ್ಜಾಗೆ ಪತ್ರ ಬರೆದು ಪ್ರಧಾನಿ ಮೋದಿ ಶ್ಲಾಘನೆ
ಎರಡು ದಶಕಗಳ ಟೆನಿಸ್ ಬದುಕಿಗೆ ವಿದಾಯ ಘೋಷಿಸಿದ ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ ಸಾಧನೆ ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ
ನಿಮ್ಮ ಶ್ರೇಷ್ಠ ಆಟದಲ್ಲಿ ಭಾರತದ ಕ್ರೀಡಾ ಪರಾಕ್ರಮವನ್ನು ಜಗತ್ತು ನೋಡಿದೆ ಎಂದ ಪ್ರಧಾನಿ
ನವದೆಹಲಿ(ಮಾ.12): ಇತ್ತೀಚೆಗಷ್ಟೇ ಟೆನಿಸ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ ಸಾನಿಯಾ ಮಿರ್ಜಾಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನಾ ಪತ್ರ ಬರೆದಿದ್ದು, ನಿಮ್ಮ ಶ್ರೇಷ್ಠ ಆಟದಲ್ಲಿ ಭಾರತದ ಕ್ರೀಡಾ ಪರಾಕ್ರಮವನ್ನು ಜಗತ್ತು ನೋಡಿದೆ ಎಂದು ಕೊಂಡಾಡಿದ್ದಾರೆ.
‘ನೀವು ಆಡಲು ಆರಂಭಿಸಿದಾಗ ಭಾರತದ ಟೆನಿಸ್ ಕ್ಷೇತ್ರ ತುಂಬಾ ವಿಭಿನ್ನವಾಗಿತ್ತು. ನಿಮ್ಮ ಸಾಧನೆ ನೋಡಿ ಹೆಚ್ಚಿನ ಮಹಿಳೆಯರು ಟೆನಿಸ್ ಆಯ್ಕೆ ಮಾಡಿ ಅದರಲ್ಲಿ ಉತ್ತಮ ಸಾಧನೆ ಮಾಡಬಹುದು’ ಎಂದು ಶ್ಲಾಘಿಸಿದ್ದಾರೆ. ‘ನಿಮ್ಮ ಯಶಸ್ಸು ಕ್ರೀಡೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸುವ ಹಲವಾರು ಮಹಿಳೆಯರಿಗೆ ಸ್ಫೂರ್ತಿ ತುಂಬಲಿದೆ. ಕ್ರೀಡೆಯ ಬಗ್ಗೆ ಹಿಂಜರಿಕೆ ಇರುವವರಿಗೆ ಶಕ್ತಿ ನೀಡಲಿದೆ’ ಎಂದಿದ್ದಾರೆ.
ಪ್ರಧಾನಿಯ ಪತ್ರಕ್ಕೆ ಸಾನಿಯ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಬೆಂಬಲ ಮತ್ತು ಸ್ಫೂರ್ತಿದಾಯಕ ಮಾತುಗಳಿಗೆ ಧನ್ಯವಾದಗಳು. ನಾನು ಯಾವತ್ತೂ ದೇಶವನ್ನು ಪ್ರತಿನಿಧಿಸಲು ಹೆಮ್ಮೆ ಪಡುತ್ತೇನೆ ಮತ್ತು ಭಾರತ ಹೆಮ್ಮೆ ಪಡುವ ಹಾಗೆ ಮಾಡಲು ನನ್ನಿಂದಾಗುವ ಕೆಲಸ ಮುಂದುವರಿಸುತ್ತೇನೆ’ ಎಂದಿದ್ದಾರೆ. ಕಳೆದ ತಿಂಗಳು ದುಬೈನಲ್ಲಿ ನಡೆದ ಟೆನಿಸ್ ಟೂರ್ನಿ ಮೂಲಕ ಸಾನಿಯಾ 22 ವರ್ಷಗಳ ಕ್ರೀಡಾ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು.
ಬೆಂಗ್ಳೂರು ಮಹಿಳಾ ಟೆನಿಸ್: ಅಂಕಿತಾ ಸಿಂಗಲ್ಸ್ ಫೈನಲ್ಗೆ
ಬೆಂಗಳೂರು: ಭಾರತದ ತಾರಾ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ಐಟಿಎಫ್ ಬೆಂಗಳೂರು ಮಹಿಳಾ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ನಗರದ ಕೆಎಸ್ಎಲ್ಟಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶನಿವಾರ ಮಹಿಳಾ ಸಿಂಗಲ್ಸ್ ಸೆಮಿಫೈನಲ್ನಲ್ಲಿ 4ನೇ ಶ್ರೇಯಾಂಕಿತ ಅಂಕಿತಾ ಭಾರತದವರೇ ಆದ, ಶ್ರೇಯಾಂಕ ರಹಿತ ಋುತುಜಾ ಭೋಸ್ಲೆ ವಿರುದ್ಧ 6-1, 6-1 ನೇರ ಸೆಟ್ಗಳಲ್ಲಿ ಗೆದ್ದು ಪ್ರಶಸ್ತಿ ಸುತ್ತಿಗೇರಿದರು.
ಮತ್ತೊಂದು ಸೆಮೀಸ್ನಲ್ಲಿ ಅಗ್ರ ಶ್ರೇಯಾಂಕಿತ ಚೆಕ್ ಗಣರಾಜ್ಯದ ಬ್ರೆಂಡಾ ಪ್ರುವಿರ್ಟೋವಾ ಸ್ಲೊವೇನಿಯಾದ ದಲಿಲಾ ಜಕುಪೊವಿಚ್ ವಿರುದ್ಧ 7-6(7/2), 6-2 ಸೆಟ್ಗಳಿಂದ ಗೆದ್ದರು. ಭಾನುವಾರ ಫೈನಲ್ನಲ್ಲಿ ಅಂಕಿತಾಗೆ ಪ್ರುವಿರ್ಟೋವಾ ಸವಾಲು ಎದುರಾಗಲಿದೆ.
"ಅನುಷ್ಕಾ ಭೇಟಿಯಾದಾಗ..": ತಮ್ಮ ಬದುಕಿಗೆ ತಿರುವು ಸಿಕ್ಕ ಕ್ಷಣವನ್ನು ಮೆಲುಕು ಹಾಕಿದ ವಿರಾಟ್ ಕೊಹ್ಲಿ..!
ಇದೇ ಡಬಲ್ಸ್ನ ಫೈನಲ್ನಲ್ಲಿ ಪೋರ್ಚುಗಲ್ನ ಜಾರ್ಜ್ ಫ್ರಾನ್ಸಿಸ್ಕಾ ಹಾಗೂ ಜಾರ್ಜ್ ಮಾಟಿಲ್ಡೆ ಜೋಡಿ ಗ್ರೀಕ್‌ನ ವ್ಯಾಲೆಂಟಿನಿ ಹಾಗೂ ಬ್ರಿಟನ್ನ ಈಡನ್ ಸಿಲ್ವಾ ವಿರುದ್ಧ 5-7, 6-0, 10-3 ಅಂತರದಲ್ಲಿ ಗೆದ್ದು ಚಾಂಪಿಯನ್ ಪಟ್ಟಅಲಂಕರಿಸಿತು.
ಮೇ 21ಕ್ಕೆ ಬೆಂಗ್ಳೂರು 10ಕೆ ಮ್ಯಾರಥಾನ್
ಬೆಂಗಳೂರು: 15ನೇ ಆವೃತ್ತಿಯ ಪ್ರತಿಷ್ಠಿತ ಬೆಂಗಳೂರು 10ಕೆ ಮ್ಯಾರಥಾನ್ ಮೇ 21ರಂದು ನಡೆಯಲಿದೆ ಎಂದು ಆಯೋಜಕರು ಘೋಷಿಸಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಮ್ಯಾರಥಾನ್ನಲ್ಲಿ ದೇಶ ಹಾಗೂ ವಿದೇಶದ ಹಲವು ಎಲೈಟ್ ಅಥ್ಲೀಟ್ಗಳು ಸೇರಿ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ. ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮಾ.1ರಿಂದ ನೋಂದಣಿ ಆರಂಭಗೊಂಡಿದ್ದು, ಏಪ್ರಿಲ್ 28ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.