ಭಾರತದ ಪಾಲಿಗೆ ಇವತ್ತಿನ ಪಂದ್ಯ 900ನೇ ಏಕದಿನ ಪಂದ್ಯ. 900 ಪಂದ್ಯವಾಡಿದ ಮೊದಲ ತಂಡ ಎಂಬ ಕೀರ್ತಿಗೆ ಟೀಮ್ ಇಂಡಿಯಾ ಪಾತ್ರವಾಗಲಿದೆ. 899 ಪಂದ್ಯಗಳಲ್ಲಿ ಭಾರತ 454ರಲ್ಲಿ ಜಯಗಳಿಸಿದ್ದು 399ರಲ್ಲಿ ಸೋತಿದೆ. 7 ಪಂದ್ಯ ಟೈ ಆಗಿದ್ರೆ, 39 ಪಂದ್ಯಗಳು ರದ್ದಾಗಿವೆ. ಕಿವೀಸ್ ವಿರುದ್ಧವೇ ತನ್ನ 500ನೇ ಟೆಸ್ಟ್​ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ್ದ ಟೀಮ್ ಇಂಡಿಯಾ, 900ನೇ ಪಂದ್ಯ ಗೆದ್ದು ದಾಖಲೆ ನಿರ್ಮಿಸುತ್ತಾ ಅನ್ನೋದು ಕುತೂಹಲ ಕೆರಳಿಸಿದೆ.

ಭಾರತ-ಧರ್ಮಶಾಲಾ (ಅ.16): ನ್ಯೂಜಿಲೆಂಡ್ ಏಕದಿನ ಸರಣಿ ಆರಂಭವಾಗ್ತಿದೆ. ಇಂದು ಧರ್ಮಶಾಲಾದಲ್ಲಿ ಮೊದಲ ಪಂದ್ಯ ನಡೀತಾ ಇದೆ. ಫಸ್ಟ್ ಮ್ಯಾಚ್ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಉಭಯ ತಂಡಗಳು ಎದುರು ನೋಡುತ್ತಿವೆ. ಹಿಮಾಚಲ ಪ್ರದೇಶದ ತಪ್ಪಲಿನಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆ ಇದೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್​​ ಸರಣಿಯನ್ನ ಭಾರತ ಕ್ಲೀನ್ ಸ್ವೀಪ್ ಮಾಡಿದ್ದಾಗಿದೆ. ಈಗೇನಿದ್ದರೂ ಒಂಡೇ ಸಿರೀಸ್ ಕ್ಲೀನ್ ಸ್ವೀಪ್ ಮಾಡೋದು. ಐಸಿಸಿ ಱಂಕಿಂಗ್​ನಲ್ಲಿ ಮೇಲೇರೋ ಗುರಿ ಹೊಂದಿದೆ ಭಾರತ. ಹೌದು, ಇಂದಿನಿಂದ ಆರಂಭವಾಗುವ ಏಕದಿನ ಸರಣಿ ಗೆಲ್ಲಲು ಟೀಮ್ ಇಂಡಿಯಾ ಪಣ ತೊಟ್ಟಿದೆ. ಸರಣಿ ಗೆಲ್ಲೋದ್ರ ಜೊತೆಗೆ ಱಂಕಿಂಗ್​ನಲ್ಲಿ 4ನೇ ಸ್ಥಾನಕ್ಕೇರಲು ಎದುರು ನೋಡುತ್ತಿದೆ. ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ಕೇವಲ 2 ಸರಣಿ ಆಡಲಿದೆ. ಇದು ಸಹ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಭಾರತದ ಪಾಲಿಗೆ ಇವತ್ತಿನ ಪಂದ್ಯ 900ನೇ ಏಕದಿನ ಪಂದ್ಯ. 900 ಪಂದ್ಯವಾಡಿದ ಮೊದಲ ತಂಡ ಎಂಬ ಕೀರ್ತಿಗೆ ಟೀಮ್ ಇಂಡಿಯಾ ಪಾತ್ರವಾಗಲಿದೆ. 899 ಪಂದ್ಯಗಳಲ್ಲಿ ಭಾರತ 454ರಲ್ಲಿ ಜಯಗಳಿಸಿದ್ದು 399ರಲ್ಲಿ ಸೋತಿದೆ. 7 ಪಂದ್ಯ ಟೈ ಆಗಿದ್ರೆ, 39 ಪಂದ್ಯಗಳು ರದ್ದಾಗಿವೆ. ಕಿವೀಸ್ ವಿರುದ್ಧವೇ ತನ್ನ 500ನೇ ಟೆಸ್ಟ್​ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ್ದ ಟೀಮ್ ಇಂಡಿಯಾ, 900ನೇ ಪಂದ್ಯ ಗೆದ್ದು ದಾಖಲೆ ನಿರ್ಮಿಸುತ್ತಾ ಅನ್ನೋದು ಕುತೂಹಲ ಕೆರಳಿಸಿದೆ.

ಟೆಸ್ಟ್​ ತಂಡವೇನೋ ಬಲಿಷ್ಠವಾಗಿತ್ತು. ಆದ್ರೆ ಏಕದಿನ ತಂಡ ಹೇಳಿಕೊಳ್ಳುವಷ್ಟು ಬಲಿಷ್ಠವಾಗಿಲ್ಲ. ತಂಡದಲ್ಲಿ ಹೆಚ್ಚಾಗಿ ಹೊರಬರೇ ಇದ್ದಾರೆ. ಹೀಗಾಗಿ ಟೀಮ್ ಇಂಡಿಯಾ ದುರ್ಬಲವಾಗಿ ಕಾಣುತ್ತಿದೆ. ಇದು ಧೋನಿಗೆ ಸವಾಲಾಗಿ ಪರಿಣಮಿಸಿದೆ. ರೋಹಿತ್ ಶರ್ಮಾ ಜೊತೆ ಅಜಿಂಕ್ಯಾ ರಹಾನೆ ಅಥವಾ ಮಂದೀಪ್ ಸಿಂಗ್​​​​​ ಇಬ್ಬರಲ್ಲಿ ಒಬ್ಬರು ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಕೊಹ್ಲಿ, ಮನೀಶ್ ಪಾಂಡೆ, ಧೋನಿ , ಕೇದರ್ ಜಾಧವ್ ಬ್ಯಾಟಿಂಗ್ ಬಲ. ಜ್ವರದಿಂದ ಬಳಲುತ್ತಿರುವ ಸುರೇಶ್​ ರೈನಾ ಆಡದೆ ಇರುವುದು ತಂಡಕ್ಕೆ ಸ್ವಲ್ಪ ಹಿನ್ನಡೆಯಾಗಲಿದೆ.

ಹೌದು, ಸದ್ಯ ಟೀಮ್​ನಲ್ಲಿ ಮೂವರು ಆಲ್​ರೌಂಡರ್ಸ್ ಇದ್ದಾರೆ. ಮೂವರು ಇಂದು ಆಡುವ ಸಾಧ್ಯತೆ ಇದೆ. ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ಮತ್ತು ಜಯಂತ್ ಯಾದವ್​ ಅವರನ್ನ ಇಂದು ಧೋನಿ ಕಣಕ್ಕಿಳಿಸಲಿದ್ದಾರೆ. ಈ ಮೂವರು ಆಡಿದರೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ಟೀಮ್ ಸ್ಟ್ರಾಂಗ್​​ ಆಗಲಿದೆ. ಜಯಂತ್​, ಪಾಂಡ್ಯ ಮತ್ತು ಮಂದೀಪ್​ ಚೊಚ್ಚಲ ಏಕದಿನ ಪಂದ್ಯವಾಡಲು ಎದುರು ನೋಡುತ್ತಿದ್ದಾರೆ.

ಉಮೇಶ್ ಯಾದವ್, ಜಸ್​ಪ್ರೀತ್ ಬುಮ್ರಾ ಮತ್ತು ಧವಳ್ ಕುಲ್ಕರ್ಣಿ ಫಾಸ್ಟ್ ಬೌಲರ್ಸ್. ಇವರಲ್ಲಿ ಒಬ್ಬರು 11ರ ಬಳಗದಿಂದ ಡ್ರಾಪ್ ಆಗಲಿದ್ದಾರೆ. 

ಟೆಸ್ಟ್​ ಸರಣಿ ಸೋತಿರುವ ನ್ಯೂಜಿಲೆಂಡ್, ಏಕದಿನ ಸರಣಿಯಲ್ಲಿ ಪುಟಿದೇಳಲು ಎದುರು ನೋಡುತ್ತಿದೆ. ಕೆಲ ಆಟಗಾರರು ಟೀಮ್ ಸೇರಿಕೊಂಡಿದ್ದಾರೆ. ಕೋರೆ ಆಂಡರ್​ಸನ್ ಬಂದಿರೋದು ಕಿವೀಸ್​ಗೆ ಆನೆ ಬಲ ಬಂದಂತಾಗಿದೆ. ಟೀಮ್ ಇಂಡಿಯಾ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾದು ಕುಳಿತಿದೆ. ಆದ್ರೆ ಭಾರತದಲ್ಲಿ ಇದುವೆಗೂ ದ್ವಿಪಕ್ಷೀಯ ಏಕದಿನ ಸರಣಿಯನ್ನ ನ್ಯೂಜಿಲೆಂಡ್ ಗೆದ್ದಿಲ್ಲ. ಈ ಸಲ ಇತಿಹಾಸ ನಿರ್ಮಿಸುತ್ತಾ ಅನ್ನೋದನ್ನ ನೋಡ್ಬೇಕು.


ಕಿವೀಸ್ ಸಹ ಸ್ಪಿನ್ ಅಸ್ತ್ರವನ್ನ ಹೊಂದಿದೆ. ಸ್ಪಿನ್ ಅಸ್ತ್ರದಿಂದಲೇ ಇದೇ ವರ್ಷದ ಟಿ20 ವರ್ಲ್ಡ್​ಕಪ್​ನಲ್ಲಿ ಭಾರತವನ್ನ ಸೋಲಿಸಿತ್ತು. ಹೀಗಾಗಿ ನ್ಯೂಜಿಲೆಂಡ್ ತಂಡವನ್ನ ಹಗುರವಾಗಿ ಪರಿಗಣಿಸುವಂತ್ತಿಲ್ಲ. ಧರ್ಮಶಾಲಾದಲ್ಲೇ ಟಿ20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾವನ್ನ ಸೋಲಿಸಿತ್ತು ಕಿವೀಸ್. ಈ ಎಲ್ಲವನ್ನ ನೋಡಿದ್ರೆ ನ್ಯೂಜಿಲೆಂಡ್ ಡೇಂಜರಸ್​ ಟೀಮ್ ಅನ್ನೋದ್ರಲ್ಲಿ ನೋ ಡೌಟ್.