ಅತ್ತ ಕಿವೀಸ್ ಸರಣಿಯಲ್ಲಿ ಸಮಬಲ ಸಾಧಿಸಲು ಕಾದು ಕುಳಿತಿದೆ. ಮೊದಲ ಮೂರು ಪಂದ್ಯವಾಡಿದ ತಂಡವನ್ನೇ ಧೋನಿ ಕಣಕ್ಕಿಳಿಸುವ ಸಾಧ್ಯತೆ ಇದೆ. ಇನ್ನು ರಾಂಚಿಯಲ್ಲಿ ಟೀಮ್ ಇಂಡಿಯಾ ಸೋತೇ ಇಲ್ಲ.
ರಾಂಚಿ(ಅ.26): ಇಂದು ರಾಂಚಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 4ನೇ ಏಕದಿನ ಪಂದ್ಯ ನಡೆಯಲಿದೆ. ಟೀಮ್ ಇಂಡಿಯಾ ಇನ್ನೊಂದು ಪಂದ್ಯ ಬಾಕಿ ಇರುವಾಗ್ಲೇ ಸರಣಿ ಗೆಲ್ಲಲು ಎದುರು ನೋಡುತ್ತಿದೆ.
ಅತ್ತ ಕಿವೀಸ್ ಸರಣಿಯಲ್ಲಿ ಸಮಬಲ ಸಾಧಿಸಲು ಕಾದು ಕುಳಿತಿದೆ. ಮೊದಲ ಮೂರು ಪಂದ್ಯವಾಡಿದ ತಂಡವನ್ನೇ ಧೋನಿ ಕಣಕ್ಕಿಳಿಸುವ ಸಾಧ್ಯತೆ ಇದೆ. ಇನ್ನು ರಾಂಚಿಯಲ್ಲಿ ಟೀಮ್ ಇಂಡಿಯಾ ಸೋತೇ ಇಲ್ಲ.
ತನ್ನ ಅಜೇಯ ಓಟವನ್ನ ಮುಂದುವರೆಸಿಕೊಂಡು ಹೋಗಲು ಪ್ಲಾನ್ ಮಾಡುತ್ತಿದೆ. ಧೋನಿ ತವರೂರು ಆಗಿರೋದ್ರಿಂದ ಸಾಕಷ್ಟು ಕ್ರಿಕೆಟ್ ಫ್ಯಾನ್ಸ್ ಸೇರಲಿದ್ದಾರೆ. ವಿರಾಟ್ ಕೊಹ್ಲಿ ಆಡಿರುವ ಎರಡು ಪಂದ್ಯದಲ್ಲಿ ಒಂದು ಶತಕ, ಒಂದು ಅರ್ಧಶತಕ ದಾಖಲಿಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲೂ ಅವರೇ ಟ್ರಂಪ್ಕಾರ್ಡ್.