ಕೊಲ್ಕತ್ತಾ(ಅ.02): ತವರಿನ 250ನೇ ಟೆಸ್ಟ್ ಆಡುತ್ತಿರುವ ಭಾರತ, ಕಿವೀಸ್ ವಿರುದ್ಧ 112ರನ್ಗಳ ಮುನ್ನಡೆ ಸಾಧಿಸಿದೆ.
ಕೋಲ್ಕತ್ತಾದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಕಿವೀಸ್ ತಂಡವನ್ನು ಭಾರತ 204ರನ್ಗಳಿಗೆ ಕಟ್ಟಿ ಹಾಕಿದೆ.
ನಿನ್ನೆ 7 ವಿಕೆಟ್ ಉರುಳಿಸಿದ್ದ ಟೀಮ್ ಇಂಡಿಯಾ, ಇಂದು ಉಳಿದ 3 ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾಯ್ತು.
ಭಾರತದ ಪರ ಭುವಿ 5, ಶಮಿ 3, ಅಶ್ವಿನ್ ಹಾಗೂ ಜಡ್ಡು ತಲಾ 1 ವಿಕೆಟ್ ಪಡೆದುಕೊಂಡಿದ್ದಾರೆ...
