ತಂಡ ಫೈನಲ್‌ ಪ್ರವೇಶಿಸಲು ಕನಿಷ್ಠ ಡ್ರಾ ಸಾಧಿಸಬೇಕಿದೆ. ಆಡಿರುವ 4 ಪಂದ್ಯಗಳಲ್ಲಿ 2 ಗೆಲುವು, 1 ಸೋಲು, 1 ಡ್ರಾ ಪಡೆದಿರುವ ಭಾರತ 7 ಅಂಕ ಗಳಿಸಿ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 

ಬ್ರೆಡಾ[ಜೂ.30]: ಅಂತಿಮ ಆವೃತ್ತಿಯ ಚಾಂಪಿಯನ್ಸ್‌ ಹಾಕಿ ಟ್ರೋಫಿ ಟೂರ್ನಿಯಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಭಾರತ, ಶನಿವಾರ ನಡೆಯಲಿರುವ ರೌಂಡ್‌ ರಾಬಿನ್‌ ಹಂತದ ಕೊನೆ ಪಂದ್ಯದಲ್ಲಿ, ನೆದರ್‌ಲೆಂಡ್ಸ್‌ ವಿರುದ್ಧ ಸೆಣಸಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಂಡ ಫೈನಲ್‌ ಪ್ರವೇಶಿಸಲು ಕನಿಷ್ಠ ಡ್ರಾ ಸಾಧಿಸಬೇಕಿದೆ. ಆಡಿರುವ 4 ಪಂದ್ಯಗಳಲ್ಲಿ 2 ಗೆಲುವು, 1 ಸೋಲು, 1 ಡ್ರಾ ಪಡೆದಿರುವ ಭಾರತ 7 ಅಂಕ ಗಳಿಸಿ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 

ನೆದರ್‌ಲೆಂಡ್ಸ್‌ 6 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. 10 ಅಂಕಗಳಿಸಿರುವ ಆಸ್ಪ್ರೇಲಿಯಾ, ಅಗ್ರಸ್ಥಾನದಲ್ಲಿದ್ದು ಈಗಾಗಲೇ ಫೈನಲ್‌ ಪ್ರವೇಶಿಸಿದೆ. ಟೂರ್ನಿಯಲ್ಲಿ ಒಟ್ಟು 6 ತಂಡಗಳಿದ್ದು, ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಫೈನಲ್‌ಗೇರಲಿವೆ.