ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಕದಿನ ಸರಣಿಯಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವನ್ನು 4-1ರಿಂದ ಸೋಲಿಸಿದ್ದ ಭಾರತ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು.

ದುಬೈ(ಅ.20): ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡ ಅಗ್ರಸ್ಥಾನ ಕಳೆದುಕೊಂಡಿದೆ.

ಬಾಂಗ್ಲಾದೇಶ ವಿರುದ್ಧ ಬುಧವಾರ ನಡೆದ 2ನೇ ಏಕದಿನದಲ್ಲಿ ಗೆಲುವು ಸಾಧಿಸಿದ ದ.ಆಫ್ರಿಕಾ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿತು. ಭಾರತ ಹಾಗೂ ದ.ಆಫ್ರಿಕಾ ಎರಡೂ ತಂಡಗಳು ತಲಾ 120 ಅಂಕಗಳನ್ನು ಹೊಂದಿದ್ದರೂ, ಆಫ್ರಿಕಾ ತಂಡ ಭಾರತಕ್ಕಿಂತ ಹೆಚ್ಚಿಗೆ ರೇಟಿಂಗ್ ಅಂಕಗಳನ್ನು ಹೊಂದಿದೆ.

ಕೆಲವೇ ಅಂಕಗಳ ಅಂತರದಿಂದ ಭಾರತ 2ನೇ ಸ್ಥಾನದಲ್ಲಿದ್ದು, ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್'ಸ್ವೀಪ್ ಮಾಡಿದರೆ ಕೊಹ್ಲಿ ಪಡೆಗೆ ಮತ್ತೊಮ್ಮೆ ಅಗ್ರಸ್ಥಾನಕ್ಕೇರುವ ಅವಕಾಶವಿದೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಕದಿನ ಸರಣಿಯಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವನ್ನು 4-1ರಿಂದ ಸೋಲಿಸಿದ್ದ ಭಾರತ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತ್ತು.