ದಿಗ್ಗಜ ಪೇಸ್‌ಗೆ ಜತೆಯಾದ 7ನೇ ಭಾರತೀಯ ಆಟಗಾರ ಎನ್ನುವ ಖ್ಯಾತಿಗೆ ಪೂರವ್ ಪಾತ್ರರಾಗಿದ್ದಾರೆ.
ನವದೆಹಲಿ(ಆ.21): ಭಾರತ ಡೇವಿಸ್ ಕಪ್ ತಂಡದಿಂದ ಹೊರಬಿದ್ದಿರುವ ಲಿಯಾಂಡರ್ ಪೇಸ್, ಮುಂಬರುವ ಯುಎಸ್ ಓಪನ್'ನತ್ತ ಗಮನ ಕೇಂದ್ರೀಕರಿಸಿದ್ದು ಹೊಸ ಜತೆಗಾರನನ್ನು ಹುಡುಕಿಕೊಂಡಿದ್ದಾರೆ.
ವಿಂಬಲ್ಡನ್ ಸೇರಿದಂತೆ ಇತ್ತೀಚಿನ ಕೆಲ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಮುಂಬೈನ ಪೂರವ್ ರಾಜ ಜತೆ ಪೇಸ್ ಕೈಜೋಡಿಸಿದ್ದಾರೆ.
ಈ ಜೋಡಿ ಯುಎಸ್ ಓಪನ್ ಪುರುಷರ ಡಬಲ್ಸ್'ನಲ್ಲಿ ಕಣಕ್ಕಿಳಿಯಲಿದೆ. ಅದಕ್ಕೂ ಮುನ್ನ ನಡೆಯುವ ವಿನ್ಸ್ಟನ್-ಸಲೆಮ್ ಓಪನ್'ನಲ್ಲೂ ಪೇಸ್-ರಾಜ ಜೋಡಿ ಆಡಲಿದೆ. ದಿಗ್ಗಜ ಪೇಸ್ಗೆ ಜತೆಯಾದ 7ನೇ ಭಾರತೀಯ ಆಟಗಾರ ಎನ್ನುವ ಖ್ಯಾತಿಗೆ ಪೂರವ್ ಪಾತ್ರರಾಗಿದ್ದಾರೆ.
