* ಮಹಿಳೆಯರ ಹಾಕಿ ವಿಶ್ವಕಪ್ ಟೂರ್ನಿ* ತನ್ನ ಮೊದಲ ಪಂದ್ಯದಲ್ಲಿ ಡ್ರಾ ಫಲಿತಾಂಶ ಕಂಡ ಭಾರತ* ನಾಳೆ ಭಾರತಕ್ಕೆ ಚೀನಾ ಸವಾಲು
ಆ್ಯಮ್‌ಸ್ಟಲ್ವೀನ್ (ಜು.4): ಮಹಿಳೆಯರ ಹಾಕಿ ವಿಶ್ವಕಪ್ (Womens Hockey World Cup) ಟೂರ್ನಿಯನ್ನು ಭಾರತ ಡ್ರಾದೊಂದಿಗೆ ಆರಂಭಿಸಿದೆ. ಭಾನುವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 1-1ರ ಡ್ರಾಗೆ ತೃಪ್ತಿಪಟ್ಟಿತು. 9ನೇ ನಿಮಿಷದಲ್ಲೇ ಇಸ್ಸಾಬೆಲ್ ಬಾರಿಸಿದ ಗೋಲು ಇಂಗ್ಲೆಂಡ್‌ಗೆ ಮುನ್ನಡೆ ಒದಗಿಸಿತು. ಬಳಿಕ 28ನೇ ನಿಮಿಷದಲ್ಲಿ ವಂದನಾ ಕಟಾರಿಯಾ (Vandana Katariya) ಗೋಲು ಬಳಿಸಿ ಭಾರತ ಸಮಬಲ ಸಾಧಿಸಲು ನೆರವಾದರು. ಪಂದ್ಯದಲ್ಲಿ 7 ಪೆನಾಲ್ಟಿಕಾರ್ನರ್ ಅವಕಾಶಗಳು ಸಿಕ್ಕರೂ ಭಾರತ ಕೇವಲ ಒಂದರಲ್ಲಿ ಗೋಲು ಬಾರಿಸಿದ್ದು ಗೆಲುವು ಒಲಿಯದಿರಲು ಪ್ರಮುಖ ಕಾರಣವೆನಿಸಿತು. ಜೊತೆಗೆ ನಾಯಕಿ ಹಾಗೂ ಗೋಲ್‌ಕೀಪರ್ ಸವಿತಾ ಪೂನಿಯಾ ತೋರಿದ ಉತ್ತಮ ಪ್ರದರ್ಶನ ಭಾರತವನ್ನು ಸೋಲಿನಿಂದ ಪಾರು ಮಾಡಿತು. ಮಂಗಳವಾರ 2ನೇ ಪಂದ್ಯದಲ್ಲಿ ಭಾರತ, ಚೀನಾ (China) ವಿರುದ್ಧ ಸೆಣಸಲಿದೆ.
ಭಾರತ ವನಿತೆಯರಿಗೆ ಸರಣಿ ಜಯದ ಗುರಿ
ಪಲ್ಲೆಕೆಲೆ: ಶ್ರೀಲಂಕಾ ವಿರುದ್ಧ ಸೋಮವಾರ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲಿ ಜಯಿಸಿ 3 ಪಂದ್ಯಗಳ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿರುವ ಹರ್ಮನ್‌ಪ್ರೀತ್ ಕೌರ್ (harmanpreet kaur) ಪಡೆ ಈ ಪಂದ್ಯದಲ್ಲಿ ಸುಧಾರಿತ ಬ್ಯಾಟಿಂಗ್ ಪ್ರದರ್ಶನ ತೋರಲು ಎದುರು ನೋಡುತ್ತಿದೆ. ಟಿ20 ಸರಣಿಯನ್ನು 2-1ರ ಅಂತರದಲ್ಲಿ ಗೆದ್ದ ಬಳಿಕ ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್ ಗೆಲುವು ಸಾಧಿಸಿದ್ದ ಭಾರತ, ಮತ್ತೊಮ್ಮೆ ಪ್ರಾಬಲ್ಯ ಮೆರೆಯಲು ಕಾಯುತ್ತಿದೆ. ಆರಂಭಿಕರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧನಾ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ ಅವರಿಂದಲೂ ತಂಡ ಉತ್ತಮ ಪ್ರದರ್ಶನ ನಿರೀಕ್ಷೆ ಮಾಡುತ್ತಿದೆ. ಭಾರತೀಯ ಬೌಲರ್‌ಗಳು ತಮ್ಮ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.
ಪಂದ್ಯ ಆರಂಭ: ಬೆಳಗ್ಗೆ 10ಕ್ಕೆ
44ನೇ ಚೆಸ್ ಒಲಿಂಪಿಯಾಡ್: ಭಾರತದ 3ನೇ ತಂಡ ಕಣಕ್ಕೆ
ಚೆನ್ನೈ: ಜುಲೈ 29ರಿಂದ ಆ.10ರ ವರೆಗೆ ಚೆನ್ನೈನಲ್ಲಿ ನಿಗದಿಯಾಗಿರುವ 44ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ಮುಕ್ತ ವಿಭಾಗದಲ್ಲಿ 3ನೇ ತಂಡ ಕಣಕ್ಕಿಳಿಸಲಿದೆ. ಆತಿಥೇಯ ದೇಶಕ್ಕೆ ಕನಿಷ್ಠ 2 ಮತ್ತು ಗರಿಷ್ಠ 3 ತಂಡಗಳನ್ನು ಆಡಿಸುವ ಅವಕಾಶವಿದ್ದು, ಅದನ್ನು ಭಾರತ ಕೊನೆ ಕ್ಷಣದಲ್ಲಿ ಬಳಸಿಕೊಂಡಿದೆ. ಮಹಿಳಾ ವಿಭಾಗದಲ್ಲಿ ಭಾರತ 2 ತಂಡಗಳನ್ನು ಆಡಿಸಲಿದೆ. ಈ ಬಾರಿ ಈಗಾಗಲೇ ಮುಕ್ತ ವಿಭಾಗದಲ್ಲಿ 187 ತಂಡಗಳು ಮತ್ತು ಮಹಿಳಾ ವಿಭಾಗದಲ್ಲಿ 162 ತಂಡಗಳು ನೋಂದಣಿ ಮಾಡಿಕೊಂಡಿದ್ದು, ದಾಖಲೆ ಎನಿಸಿಕೊಂಡಿದೆ. 2018ರಲ್ಲಿ ಜಾರ್ಜಿಯಾದಲ್ಲಿ ನಡೆದಿದ್ದ ಒಲಿಂಪಿಯಾಡ್‌ನಲ್ಲಿ 179 ದೇಶಗಳು ಸ್ಪರ್ಧೆ ನಡೆಸಿದ್ದು ಈವರೆಗಿನ ದಾಖಲೆಯಾಗಿತ್ತು.'
ENG VS IND ಬಮಿಂಗ್‌ಹ್ಯಾಮ್‌ನಲ್ಲಿ ಭಾರತದ್ದೇ ಮೇಲುಗೈ
ಮಳೆ: ವಿಂಡೀಸ್-ಬಾಂಗ್ಲಾ ಮೊದಲ ಟಿ20 ಪಂದ್ಯ ರದ್ದು
ರೋಸೌ(ಡೊಮಿನಿಕಾ): ವೆಸ್ಟ್‌ಇಂಡೀಸ್ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ಶನಿವಾರ ಸುರಿದ ಭಾರೀ ಮಳೆಯಿಂದಾಗಿ ಮೈದಾನ ತೇವಗೊಂಡಿದ್ದರಿಂದ ಪಂದ್ಯವನ್ನು ಸುಮಾರು ಒಂದೂವರೆ ಗಂಟೆ ತಡವಾಗಿ ಆರಂಭಿಸಲಾಗಿತ್ತು. ಓವರ್‌ಗಳನ್ನು ತಲಾ 16ಕ್ಕೆ ಇಳಿಸಿ ಪಂದ್ಯ ಪ್ರಾರಂಭಿಸಿದರೂ ಮತ್ತೆ ಮಳೆ ಅಡ್ಡಿಪಡಿಸಿತು. ಬಳಿಕ 14 ಓವರ್‌ಗಳ ಪಂದ್ಯ ನಡೆಸಲು ನಿರ್ಧರಿಸಲಾಯಿತಾದರೂ ಬಾಂಗ್ಲಾದೇಶ 13 ಓವರ್‌ಗಳಲ್ಲಿ 8 ವಿಕೆಟ್‌ಗೆ 105 ರನ್ ಗಳಿಸಿದ್ದಾಗ ಮಳೆ ತೀವ್ರಗೊಂಡಾಗ ಪಂದ್ಯ ರದ್ದುಗೊಳಿಸಲಾಯಿತು.
Happy Birthday Harbhajan Singh ಭಜ್ಜಿ ಹುಟ್ಟುಹಬ್ಬಕ್ಕೆ ಪಾರ್ಟಿ ಕೇಳಿದ ಶಿಖರ್ ಧವನ್..!
2ನೇ ಅಭ್ಯಾಸ ಪಂದ್ಯದಲ್ಲೂ ಭಾರತಕ್ಕೆ ಭರ್ಜರಿ ಜಯ
ನಾರ್ಥಾಂಪ್ಟನ್: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಉತ್ತಮ ಅಭ್ಯಾಸ ನಡೆಸಿದೆ. ಭಾನುವಾರ ನಡೆದ 2ನೇ ಅಭ್ಯಾಸ ಪಂದ್ಯದಲ್ಲಿ ನಾರ್ಥಾಂಪ್ಟನ್‌ಶೈರ್ ವಿರುದ್ಧ 10 ರನ್‌ಗಳ ಗೆಲುವು ಸಾಧಿಸಿತು. ಮೊದಲು ಪಂದ್ಯದಲ್ಲಿ ಡರ್ಬಿಶೈರ್ ವಿರುದ್ಧ ಗೆದ್ದಿತ್ತು. ಭಾನುವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಆರಂಭಿಕ ಆಘಾತ ಅನುಭವಿಸಿದರೂ ಹರ್ಷಲ್ ಪಟೇಲ್‌ರ ಸ್ಫೋಟಕ ಅರ್ಧಶತಕದ ನೆರವಿನಿಂದ 20 ಓವರಲ್ಲಿ 9 ವಿಕೆಟ್‌ಗೆ 149 ರನ್ ಗಳಿಸಿತು. ಹರ್ಷಲ್ 36 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ನೊಂದಿಗೆ 54 ರನ್ ಸಿಡಿಸಿದರು. ನಾರ್ಥಾಂಪ್ಟನ್‌ಶೈರ್ 19.3 ಓವರಲ್ಲಿ 139 ರನ್‌ಗೆ ಆಲೌಟ್ ಆಯಿತು. ಅಶ್‌ರ್‍ದೀಪ್, ಆವೇಶ್, ಹರ್ಷಲ್, ಚಹಲ್ ತಲಾ 2 ವಿಕೆಟ್ ಕಿತ್ತರು.
