ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ 2-0 ಅಂತರದಲ್ಲಿ ಟೀಂ ಇಂಡಿಯಾ ಸರಣಿ ಗೆದ್ದುಕೊಂಡಿದೆ. ಇದೀಗ ಕೊನೆಯ ಔಪಚಾರಿಕ ಪಂದ್ಯದಲ್ಲೂ ಜಯಭೇರಿ ಬಾರಿಸುವ ವಿಶ್ವಾಸದಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯಲಿದೆ. ಇನ್ನು ಕೊನೆಯ ಪಂದ್ಯವನ್ನಾದರೂ ಗೆದ್ದು 2017ಕ್ಕೆ ಗುಡ್ ಬೈ ಹೇಳುವ ನಿರೀಕ್ಷೆಯಲ್ಲಿದೆ ಲಂಕಾ ಪಡೆ.

ಮುಂಬೈ(ಡಿ.24): ಲಂಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ದುಕೊಂಡಿದೆ. ಭಾರತ ತಂಡದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದ್ದು ಚಾಹಲ್ ಹಾಗೂ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು ಮೊಹಮ್ಮದ್ ಸಿರಾಜ್ ತಂಡ ಕೂಡಿಕೊಂಡರೆ, ಯುವ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಟಿ20 ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ್ದಾರೆ.

ಭಾರತ-ಶ್ರೀಲಂಕಾ ನಡುವಿನ ಕೊನೆಯ ಪಂದ್ಯಕ್ಕೆ ಆತಿಥ್ಯ ವಹಿಸಲು ಮುಂಬೈನ ವಾಂಖೆಡೆ ಮೈದಾನ ಸಜ್ಜಾಗಿದ್ದು, ಭಾರತ ಪರ ಎರಡು ಬದಲಾವಣೆ ಮಾಡಲಾಗಿದ್ದರೆ, ಲಂಕಾ ತಂಡದಲ್ಲೂ 2 ಬದಲಾವಣೆ ಮಾಡಲಾಗಿದ್ದು ಮ್ಯಾಥ್ಯೂಸ್ ಹಾಗೂ ಸಿಲ್ವಾ ಬದಲಿಗೆ ಗುಣತಿಲಕಾ ಹಾಗೂ ಸನಕ ತಂಡ ಕೂಡಿಕೊಂಡಿದ್ದಾರೆ

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ 2-0 ಅಂತರದಲ್ಲಿ ಟೀಂ ಇಂಡಿಯಾ ಸರಣಿ ಗೆದ್ದುಕೊಂಡಿದೆ. ಇದೀಗ ಕೊನೆಯ ಔಪಚಾರಿಕ ಪಂದ್ಯದಲ್ಲೂ ಜಯಭೇರಿ ಬಾರಿಸುವ ವಿಶ್ವಾಸದಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯಲಿದೆ. ಇನ್ನು ಕೊನೆಯ ಪಂದ್ಯವನ್ನಾದರೂ ಗೆದ್ದು 2017ಕ್ಕೆ ಗುಡ್ ಬೈ ಹೇಳುವ ನಿರೀಕ್ಷೆಯಲ್ಲಿದೆ ಲಂಕಾ ಪಡೆ.

ತಂಡಗಳು ಹೀಗಿವೆ:

ಭಾರತ:

ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ಎಂ.ಎಸ್. ಧೋನಿ, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, , ಜಯದೇವ್ ಉನಾದ್ಕಟ್, ಮೊಹಮ್ಮದ್ ಸಿರಾಜ್

ಶ್ರೀಲಂಕಾ: ನಿರ್ಶೋನ್ ಡಿಕ್'ವೆಲ್ಲಾ, ಉಫುಲ್ ತರಂಗಾ, ಕುಸಾಲ್ ಪೆರೇರಾ, ಧನುಷ್ಕಾ ಗುಣತಿಲಕ, ಸದೀರಾ ಸಮರವಿಕ್ರಮ, ಅಸೀಲಾ ಗುಣರತ್ನೆ, ತಿಸಾರ ಪೆರೇರಾ, ಅಕಿಲಾ ಧನಂಜಯ, ದುಸ್ಮಂತ ಚಮೀರಾ, ನುವಾನ್ ಪ್ರದೀಪ್, ದಶುನ್ ಸನಕಾ