ಎಂಟರಘಟ್ಟದ ಪಂದ್ಯದಲ್ಲಿ 3ನೇ ಶ್ರೇಯಾಂಕಿತ ಭಾರತದ ಮನು ಮತ್ತು ಸುಮಿತ್ ಜೋಡಿ 12-21, 15-21 ಗೇಮ್‌'ಗಳಿಂದ ಕೊರಿಯಾದ ಕಿಮ್ ವಾನ್ ಹೊ ಹಾಗೂ ಸೆಂಗ್ ಜೇ ಸಿಯೊ ಜೋಡಿ ವಿರುದ್ಧ ಸೋಲು ಕಂಡಿತು.

ಕಲ್ಗಾರಿ(ಜು.15): ಹಾಲಿ ಚಾಂಪಿಯನ್ ಭಾರತದ ಪುರುಷರ ಡಬಲ್ಸ್ ಆಟಗಾರರಾದ ಮನು ಅತ್ರಿ ಮತ್ತು ಬಿ ಸುಮಿತ್ ರೆಡ್ಡಿ ಜೋಡಿ, ಕೆನಡಾ ಓಪನ್ ಗ್ರ್ಯಾನ್ ಪ್ರೀ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌'ಫೈನಲ್‌'ನಲ್ಲಿ ಸೋಲು ಕಾಣುವ ಮೂಲಕ ಭಾರತದ ಸವಾಲು ಅಂತ್ಯವಾಗಿದೆ.

ಇಂದು ನಡೆದ ಎಂಟರಘಟ್ಟದ ಪಂದ್ಯದಲ್ಲಿ 3ನೇ ಶ್ರೇಯಾಂಕಿತ ಭಾರತದ ಮನು ಮತ್ತು ಸುಮಿತ್ ಜೋಡಿ 12-21, 15-21 ಗೇಮ್‌'ಗಳಿಂದ ಕೊರಿಯಾದ ಕಿಮ್ ವಾನ್ ಹೊ ಹಾಗೂ ಸೆಂಗ್ ಜೇ ಸಿಯೊ ಜೋಡಿ ವಿರುದ್ಧ ಸೋಲು ಕಂಡಿತು.

ಇನ್ನು ಮಿಶ್ರ ಡಬಲ್ಸ್ ವಿಭಾಗದ ಎಂಟರಘಟ್ಟದ ಪಂದ್ಯದಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್. ಸಿಕ್ಕಿ ರೆಡ್ಡಿ ಜೋಡಿ 17-21, 22-20, 18-21 ಗೇಮ್‌ಗಳಿಂದ ಕೊರಿಯಾದ ಕಿಮ್ ವಾನ್ ಹೊ ಮತ್ತು ಶಿನ್ ಸೆಂಗ್ ಜೋಡಿ ಎದುರು ಸೋಲುಂಡಿತು.