ಸರ್ಕಾರದ ಈ ನಿರ್ಲಕ್ಷ್ಯದಿಂದ ಬೇಸತ್ತ ಜಾದವ್ ಅವರ ಕುಟುಂಬವು, 1952ರಲ್ಲಿ ಫಿನ್‌'ಲೆಂಡ್‌'ನಲ್ಲಿ ನಡೆದಿದ್ದ ಒಲಿಂಪಿಕ್ಸ್‌'ನಲ್ಲಿ ದಾದಾಸಾಹೇಬ್ ಅವರು ಗೆದ್ದಿದ್ದ ಕಂಚಿನ ಪದಕವನ್ನು ಹರಾಜು ಹಾಕಲು ಮುಂದಾಗಿದ್ದು, ಸರ್ಕಾರವೇ ಇದಕ್ಕೆ ಬೆಲೆ ನಿಗದಿ ಪಡಿಸಲಿ ಎಂದಿದೆ.

ಮುಂಬೈ(ಜು.24): ಕುಸ್ತಿ ಅಕಾಡೆಮಿ ಸ್ಥಾಪನೆ ಮಾಡುವುದಾಗಿ ಹಲವು ವರ್ಷಗಳ ಹಿಂದೆಯೇ ಭರವಸೆ ನೀಡಿದ್ದರೂ ಮಹಾರಾಷ್ಟ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದ ಕಾರಣ, ಒಲಿಂಪಿಕ್ಸ್‌'ನಲ್ಲಿ ಭಾರತಕ್ಕೆ ಮೊದಲ ಪದಕ ತಂದಿತ್ತ ಕುಸ್ತಿಪಟು ಕಶಬ ದಾದಾಸಾಹೇಬ್ ಜಾದವ್ ಅವರ ಕುಟುಂಬವು ಆ ಪದಕವನ್ನು ಹರಾಜು ಮಾಡಿ ಅಕಾಡಮಿ ಸ್ಥಾಪಿಸಲು ಚಿಂತನೆ ನಡೆಸಿರುವುದಾಗಿ ಹೇಳಿದೆ.

ಸತ್ರಾ ಜಿಲ್ಲೆಯ ಗೊಳೇಶ್ವರ್‌ನಲ್ಲಿ ಕುಸ್ತಿ ಅಕಾಡೆಮಿ ಸ್ಥಾಪಿಸಲು ಜಾದವ್ ಅವರ ಕುಟುಂಬದ ಸದಸ್ಯರು ಮಹಾರಾಷ್ಟ್ರ ಸರ್ಕಾರಕ್ಕೆ 2009ರಲ್ಲೇ ಮನವಿ ಸಲ್ಲಿಸಿದ್ದರು. ಈ ವೇಳೆ ಅದಕ್ಕೆ ಸಮ್ಮತಿ ಸೂಚಿಸಿದ್ದ ಸರ್ಕಾರ ಇಲ್ಲಿಯ ತನಕ ಆ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ.