ಧವನ್ ಭರ್ಜರಿ ಆಟ: ಶ್ರೀಲಂಕಾಕ್ಕೆ ಬೃಹತ್ ಟಾರ್ಗೆಟ್ ನೀಡಿದ ಭಾರತ

First Published 6, Mar 2018, 8:45 PM IST
India finish with 174 in First T20 With srilanka Match
Highlights

18ನೇ ಓವರ್'ನ ಕೊನೆಯ ಎಸೆತದಲ್ಲಿ 90 ರನ್ ಗಳಿಸಿದ್ದ ಧವನ್ ಗುಣತಿಲಕಾ ಬೌಲಿಂಗ್'ನಲ್ಲಿ ಪೆರೇರಾಗೆ ಕ್ಯಾಚಿತ್ತು ನಿರ್ಗಮಿಸಿದರು.

ಕೊಲಂಬೊ(ಮಾ.06): ಭಾರತ ತಂಡ ಆರಂಭಿಕ ಆಟಗಾರ ಶಿಖರ್ ಧವನ್ ಅವರ ಭರ್ಜರಿ 90 ರನ್'ಗಳ ಆಟದ ನೆರವಿನಿಂದ ನಿದಹಾಸ್ ತ್ರಿಕೋನ ಸರಣಿಯ ಮೊದಲ ಲೀಗ್ ಪಂದ್ಯದಲ್ಲಿ ಶ್ರೀಲಂಕಾಕ್ಕೆ 175 ರನ್'ಗಳ ಟಾರ್ಗೆಟ್ ನೀಡಿದೆ.

ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಸಿಂಹಳಿ ತಂಡದ ನಾಯಕ ದಿನೇಶ್ ಚಂಡಿಮಾಲ್ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗೆ ಬ್ಯಾಟಿಂಗ್ ಆಹ್ವಾನಿಸಿದರು. ಆಟಕ್ಕಿಳಿದ ಭಾರತ ತಂಡ ಮೊದಲ ಓವರ್'ನಲ್ಲಿಯೇ ರೋಹಿತ್ ಶರ್ಮಾ ಅವರ ವಿಕೇಟ್ ಕಳೆದುಕೊಂಡಿತು. ಖಾತೆಯನ್ನೆ ತೆರೆಯದ ರೋಹಿತ್ ಚಮೀರ್ ಬೌಲಿಂಗ್'ನಲ್ಲಿ ಶೂನ್ಯಕ್ಕೆ ಔಟಾದರು.

ರೈನಾ ಕೂಡ ಒಂದು ರನ್ ಗಳಿಸಿ ಫರ್ನಾಂಡೋ ಬೌಲಿಂಗ್'ನಲ್ಲಿ ಬೌಲ್ಡ್ ಆದರು.ಮೂರನೇ ವಿಕೇಟ್'ಗೆ ಧವನ್ ಹಾಗೂ ಪಾಂಡೆ 3ನೇ ವಿಕೇಟ್ ನಷ್ಟಕ್ಕೆ 12.4 ಓವರ್'ಗಳಲ್ಲಿ 94 ರನ್ ಪೇರಿಸಿದರು.  37(35 ಎಸೆತ,  3 ಬೌಂಡರಿ, 1 ಸಿಕ್ಸ್'ರ್) ರನ್'ಗಳಿಸಿದ ಮನೀಶ್ ಪಾಂಡೆ ಮೆಂಡೀಸ್ ಬೌಲಿಂಗ್'ನಲ್ಲಿ ಔಟಾದರು.

18ನೇ ಓವರ್'ನ ಕೊನೆಯ ಎಸೆತದಲ್ಲಿ 90 ರನ್ ಗಳಿಸಿದ್ದ ಧವನ್ ಗುಣತಿಲಕಾ ಬೌಲಿಂಗ್'ನಲ್ಲಿ ಪೆರೇರಾಗೆ ಕ್ಯಾಚಿತ್ತು ನಿರ್ಗಮಿಸಿದರು. 49 ಎಸತಗಳ ಇವರ ಅದ್ಭುತ ಆಟದಲ್ಲಿ  6 ಸಿಕ್ಸ'ರ್ ಹಾಗೂ 6 ಬೌಂಡರಿಗಳಿದ್ದವು. ಕೊನೆಯಲ್ಲಿ ರಿಶಬ್ ಪಂತ್ 21 ಚಂಡುಗಳಲ್ಲಿ 1 ಸಿಕ್ಸ್'ರ್'ನೊಂದಿಗೆ 19 ರನ್ ಬಾರಿಸಿದರು. ಶ್ರೀಲಂಕಾ ಪರ ಚಮೀರಾ 33/2,ಮೆಂಡೀಸ್, ಫರ್ನಾಂಡೊ, ಗುಣತಿಲಕ ತಲಾ ಒಂದೊಂದು ವಿಕೇಟ್ ಪಡೆದರು. ಅಂತಿಮವಾಗಿ ಶ್ರೀಲಂಕಾ ತಂಡ 20 ಓವರ್'ಗಳಲ್ಲಿ  174/5 ಪೇರಿಸಿ ಬೃಹತ್ ಟಾರ್ಗೆಟ್' ನೀಡಿದೆ.

 

ಸ್ಕೋರ್

ಭಾರತ  20 ಓವರ್'ಗಳಲ್ಲಿ 174/5

(ಧವನ್ 90, ಪಾಂಡೆ 37, ಚಮೀರಾ 33/2)

ವಿವರ ಅಪುರ್ಣ   

loader