ಭಾರತ ಪರ ಅಶ್ವಿನ್ ಹಾಗೂ ಜಡೇಜಾ ತಲಾ 4 ವಿಕೆಟ್ ಪಡೆದರೆ, ವೇಗಿ ಇಶಾಂತ್ ಶರ್ಮಾ 2 ವಿಕೆಟ್ ಪಡೆದು ಮಿಂಚಿದರು.

ಹೈದರಾಬಾದ್(ಫೆ.13): ಕುತೂಹಲ ಕೆರಳಿಸಿದ್ದ ಕೊನೆಯ ದಿನದಲ್ಲಿ ಬಾಂಗ್ಲಾ ದೇಶ ವಿರುದ್ಧ ಜಯಭೇರಿ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಗೆಲುವಿನ ನಾಗಾಲೋಟ ಮುಂದುವರೆಸಿದೆ.

ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 208 ರನ್'ಗಳ ಅಂತರದಲ್ಲಿ ಗೆಲುವಿನ ಕೇಕೆ ಹಾಕಿದೆ. ಈ ಮೂಲಕ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸೋಲಿಲ್ಲದೆ ಸತತ 19ನೇ ಗೆಲುವನ್ನು ದಾಖಲಿಸಿದೆ. ಇದರ ಜೊತೆಗೆ ಅಜೇಯವಾಗಿ ಟೀಂ ಇಂಡಿಯಾವನ್ನು ಅತಿ ಹೆಚ್ಚು ಬಾರಿ(19) ಮುನ್ನೆಡೆಸಿದ ಕೀರ್ತಿಯೂ ಕೊಹ್ಲಿ ಪಾಲಾಯಿತು.

ಒಟ್ಟು 459ರನ್'ಗಳ ಬೃಹತ್ ಗುರಿ ಬೆನ್ನತ್ತಿದ್ದ ಬಾಂಗ್ಲಾಪಡೆ ಭಾನುವಾರ ಮೂರು ವಿಕೆಟ್ ಕಳೆದುಕೊಂಡು ಡ್ರಾ ಸಾಧಿಸಲು ಹೆಣಗಾಡುತಿತ್ತು. ಜಡೇಜಾ-ಅಶ್ವಿನ್ ಮೋಡಿಗೆ ಸಿಲುಕಿದ ಮುಷ್ಫಿಕರ್ ರಹೀಮ್ ಪಡೆ ಕೇವಲ 250 ರನ್'ಗಳಿಗೆ ತನ್ನ ಹೋರಾಟ ಅಂತ್ಯಗೊಳಿಸಿತು.

ಭಾರತ ಪರ ಅಶ್ವಿನ್ ಹಾಗೂ ಜಡೇಜಾ ತಲಾ 4 ವಿಕೆಟ್ ಪಡೆದರೆ, ವೇಗಿ ಇಶಾಂತ್ ಶರ್ಮಾ 2 ವಿಕೆಟ್ ಪಡೆದು ಮಿಂಚಿದರು.

ಮೊದಲ ಇನಿಂಗ್ಸ್'ನಲ್ಲಿ ದ್ವಿಶತಕ ಸಿಡಿಸಿದ್ದ ನಾಯಕ ವಿರಾಟ್ ಕೊಹ್ಲಿ ಅರ್ಹವಾಗಿಯೇ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.