ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ  ತಯಾರಿ ಆರಂಭಿಸಿದೆ. ಟೆಸ್ಟ್ ಸರಣಿ ಗೆಲುವಿಗಾಗಿ ವಿರಾಟ್ ಕೊಹ್ಲಿ ಸೈನ್ಯದ ತಯಾರಿ ಹೇಗಿದೆ. ಇಲ್ಲಿದೆ ವಿವರ.

ಚೆಮ್ಸ್‌ಫೋರ್ಡ್(ಜು.24): ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಬಳಿಕ ವಿಶ್ರಾಂತಿ ಜಾರಿದ್ದ ಟೀಂ ಇಂಡಿಯಾ ಇದೀಗ ಟೆಸ್ಟ್ ಸರಣಿಗಾಗಿ ಅಭ್ಯಾಸ ಆರಂಭಿಸಿದೆ. ಚೆಮ್ಸ್‌ಫೋರ್ಡ್ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಭಾರತ ಕಠಿಣ ಅಭ್ಯಾಸ ನಡೆಸುತ್ತಿದೆ.

Scroll to load tweet…

ನಾಳೆಯಿಂದ(ಜು.25) ಭಾರತ ಹಾಗೂ ಎಸೆಕ್ಸ್ ನಡುವೆ 4 ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ. ಬಳಿಕ ಆಗಸ್ಟ್ 1 ರಂದು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಶುರುವಾಗಲಿದೆ. ಇದಕ್ಕಾಗಿ ಟೀಂ ಇಂಡಿಯಾ ಇದೀಗ ಪ್ರಾಕ್ಟೀಸ್ ನಡೆಸುತ್ತಿದೆ.

Scroll to load tweet…

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಗೆದ್ದ ಟೀಂ ಇಂಡಿಯಾ, ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿತ್ತು. ಇದೀಗ ಮಹತ್ವದ ಟೆಸ್ಟ್ ಸರಣಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ಇಷ್ಟೇ ಅಲ್ಲ ವಿದೇಶಿ ನೆಲದಲ್ಲಿ ಸರಣಿ ಗೆಲುವಿಗಾಗಿ ಭಾರತ ತಯಾರಿ ನಡೆಸುತ್ತಿದೆ.