ಇಂಗ್ಲೆಂಡ್ ಗೆಲುವಿಗೆ 405 ರನ್ ಟಾರ್ಗೆಟ್ ಅನ್ನು ಟೀಮ್ ಇಂಡಿಯಾ ನೀಡಿದೆ.
ವಿಶಾಖಪಟ್ಟಣ(ನ.20): ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲಿ ಇಂಗ್ಲೆಂಡ್ ಗೆಲುವಿಗೆ 405 ರನ್ ಟಾರ್ಗೆಟ್ ಅನ್ನು ಟೀಮ್ ಇಂಡಿಯಾ ನೀಡಿದೆ.
200 ರನ್ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ್ದ, ಭಾರತ, ಸೆಕೆಂಡ್ ಇನ್ನಿಂಗ್ಸ್ನಲ್ಲಿ 204 ರನ್ಗೆ ಆಲೌಟ್ ಆಯಿತು. ವಿರಾಟ್ ಕೊಹ್ಲಿ 81, ಅಜಿಂಕ್ಯಾ ರಹಾನೆ 26, ಜಯಂತ್ರ ಯಾದವ್ 27 ಮತ್ತು ಮೊಹಮ್ಮದ್ ಶಮಿ 19 ರನ್ ಬಾರಿಸಿದರು.
ಇಂದು ಮೊದಲ ಸೆಸನ್ನಲ್ಲೇ ಭಾರತದ 7 ವಿಕೆಟ್ ಉರುಳಿ ಬಿತ್ತು. ಸ್ಟುವರ್ಟ್ ಬ್ರಾಡ್ ಮತ್ತು ಆದಿಲ್ ರಶೀದ್ ತಲಾ 4 ವಿಕೆಟ್ ಪಡೆದರು. ಇವತ್ತು 4ನೇ ದಿನವಾಗಿದ್ದು, ಟೆಸ್ಟ್ ಸದ್ಯಕ್ಕೆ ಡೋಲಾಯಮಾನವಾಗಿದೆ.
