ಮೊದಲ ದಿನದಾಟದಲ್ಲಿ ಭಾರತ 2 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿದ್ದಾಗ ಮೈದಾನಕ್ಕೆ ಶ್ವಾನ ಪ್ರವೇಶ ಆಯ್ತು. ಅದನ್ನ ಓಡಿಸಲು ಎಷ್ಟೇ ಪ್ರಯತ್ನಿಸಿದ್ರೂ ಸಾಧ್ಯವಾಗಲಿಲ್ಲ.
ವಿಶಾಖಪಟ್ಟಣ(ನ.17):ಭಾರತದಲ್ಲಿ ಪಂದ್ಯ ನಡೆಯುವಾಗ ಸ್ಟೇಡಿಯಂಗೆ ಶ್ವಾನ ಬರುವುದು ಸಾಮಾನ್ಯವಾಗಿದೆ. ಭಾರತ-ಇಂಗ್ಲೆಂಡ್ 2ನೇ ಟೆಸ್ಟ್ ನಡೆಯುತ್ತಿರುವ ವೈಜಾಕ್ ಸ್ಟೇಡಿಯಂಗೂ ಶ್ವಾನ ನುಗ್ಗಿ ಕೆಲವೊತ್ತು ಪ್ರೇಕ್ಷಕರು ಹಾಗೂ ಆಟಗಾರರನ್ನ ರಂಜಿಸಿತು.
ಮೊದಲ ದಿನದಾಟದಲ್ಲಿ ಭಾರತ 2 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿದ್ದಾಗ ಮೈದಾನಕ್ಕೆ ಶ್ವಾನ ಪ್ರವೇಶ ಆಯ್ತು. ಅದನ್ನ ಓಡಿಸಲು ಎಷ್ಟೇ ಪ್ರಯತ್ನಿಸಿದ್ರೂ ಸಾಧ್ಯವಾಗಲಿಲ್ಲ.
ಪದೇಪದೇ ಮೈದಾನದ ಒಳಗೆ ಸುತ್ತಾಡುತ್ತಲೇ ಇತ್ತು. ಬೇಸತ್ತ ಅಂಪೈರ್ಗಳು ಟೀ ವಿರಾಮ ಘೋಷಿಸಿದರು. ಇದರಿಂದ ಆಟಗಾರರಿಗೂ ಕೆಲ ಹೊತ್ತು ವಿಶ್ರಾಂತಿ ಸಿಕ್ಕಿದೆ.