ಆದಾಗ್ಯೂ ಮುಂದಿನ ತಿಂಗಳು ಜೂನ್.4 ರಂದು ಇಂಗ್ಲೆಂಡ್'ನಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಪಿ'ಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೆಣಸಿಲಿದೆ. ಸೌಹಾರ್ಧ ಸರಣಿ ಆಡುವ ಸಲುವಾಗಿ ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ದುಬೈ'ನಲ್ಲಿ ಸಭೆ ನಡೆಸಿದ್ದರು ಆದರೆ ಕ್ರೀಡಾ ಸಚಿವ ಗೋಯಲ್ ಸರಣಿ ಕೈಗೊಳ್ಳದಂತೆ ಬಿಸಿಸಿಐ'ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ನವದೆಹಲಿ(ಮೇ.29): ಭಾರತ ಹಾಗೂ ಪಾಕಿಸ್ತಾನ ನಡುವೆ ಸಾಹೌರ್ಧಯುತ ಸರಣಿ ನಡೆಯುವುದಿಲ್ಲ ಎಂದು ತಿಳಿಸಿರುವ ಕೇಂದ್ರ ಕ್ರೀಡಾ ಸಚಿವರಾದ ವಿಜಯ್ ಗೋಯಲ್' ಕ್ರಿಕೆಟ್ ಹಾಗೂ ಭಯೋತ್ಪಾದನೆ ಒಂದೆ ಕಡೆ ನಡೆಯುವುದು ಅಸಾಧ್ಯ ಎಂದು ತಿಳಿಸಿದ್ದಾರೆ.
ಆದಾಗ್ಯೂ ಮುಂದಿನ ತಿಂಗಳು ಜೂನ್.4 ರಂದು ಇಂಗ್ಲೆಂಡ್'ನಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಪಿ'ಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೆಣಸಿಲಿದೆ. ಸೌಹಾರ್ಧ ಸರಣಿ ಆಡುವ ಸಲುವಾಗಿ ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ದುಬೈ'ನಲ್ಲಿ ಸಭೆ ನಡೆಸಿದ್ದರು ಆದರೆ ಕ್ರೀಡಾ ಸಚಿವ ಗೋಯಲ್ ಸರಣಿ ಕೈಗೊಳ್ಳದಂತೆ ಬಿಸಿಸಿಐ'ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ಬಿಸಿಸಿಐ ಹಾಗೂ ಪಿಸಿಬಿ 2015ರಿಂದ 2023 ವರೆಗೆ 6 ಸೌಹಾರ್ದಯುತ ಪಂದ್ಯಗಳನ್ನು ಹಮ್ಮಿಕೊಳ್ಳುವ ಒಡಂಬಡಿಕೆ ಒಪ್ಪಂದ ಮಾಡಿಕೊಂಡಿವೆ. ಪಿಸಿಬಿ 2015ರಲ್ಲಿ ಸರಣಿ ರದ್ದುಗೊಳಿಸಿದ್ದಕ್ಕೆ ಬಿಸಿಸಿಐಗೆ ನೋಟಿಸ್ ಕಳಿಸಿ ನಷ್ಟ ತುಂಬಿಕೊಡುವಂತೆ ಆಗ್ರಹಿಸಿದೆ. ಸರ್ಕಾರದ ನಿರ್ಧಾರದ ಮುಂದೆ ಬಿಸಿಸಿಐ ಅಸಹಾಯಕವಾಗಿದೆ. ಏನೆ ತೀರ್ಮಾನ ಕೈಗೊಂಡರೂ ಸರ್ಕಾರದ ಸಮ್ಮತಿ ಬೇಕೆಬೇಕು. ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. 2012-13 ಭಾರತ ಹಾಗೂ ಪಾಕ್ ನಡುವೆ ನಡೆದಿದ್ದ ಸೌಹರ್ದ ಸರಣಿಯೇ ಎರಡೂ ತಂಡಗಳಿಗೂ ಕೊನೆಯದಾಗಿದೆ. ಈ ಸರಣಿಯಲ್ಲಿ ಟಿ20 ಸರಣಿ ಡ್ರಾನಲ್ಲಿ ಮುಕ್ತಾಯಗೊಂಡರೆ ಏಕದಿನ ಪಂದ್ಯದ ಸರಣಿಯನ್ನು ಪಾಕಿಸ್ತಾನ 2-1ರಲ್ಲಿ ಗೆದ್ದುಕೊಂಡಿತ್ತು.