ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಟೀಂ ಇಂಡಿಯಾ

India continue to top ICC Test rankings Bangladesh move to 8 pushing West Indies down
Highlights

ಇನ್ನು ವೆಸ್ಟ್’ಇಂಡಿಸ್ ತಂಡವನ್ನು ಹಿಂದಿಕ್ಕಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ 8ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಆಫ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡಗಳು ತಮ್ಮ ಮೊದಲ ಟೆಸ್ಟ್ ಆಡಿದ ಬಳಿಕ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆಯಲಿವೆ. 

ದುಬೈ[ಮಾ.02]: ಭಾರತ ಕ್ರಿಕೆಟ್ ತಂಡ ಐಸಿಸಿ ಟೆಸ್ಟ್ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. 

2015-16, 2016-17ರ ಫಲಿತಾಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದು, 2ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾಕ್ಕಿಂತ 13 ಅಂಕ ಮುಂದಿದೆ. 2016-17ರ ಋತುವಿನಲ್ಲಿ ಭಾರತ ಆಡಿದ 13 ಟೆಸ್ಟ್‌’ಗಳಲ್ಲಿ 10ರಲ್ಲಿ ಗೆಲುವು ಸಾಧಿಸಿತ್ತು. ಭಾರತ ಸದ್ಯ 125 ರೇಟಿಂಗ್ ಅಂಕ ಹೊಂದಿದ್ದು, ದಕ್ಷಿಣ ಆಫ್ರಿಕಾ 112, ಆಸ್ಟ್ರೇಲಿಯಾ 106 ಅಂಕಗಳೊಂದಿಗೆ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದಿವೆ. 

ಇನ್ನು ವೆಸ್ಟ್’ಇಂಡಿಸ್ ತಂಡವನ್ನು ಹಿಂದಿಕ್ಕಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ 8ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಆಫ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡಗಳು ತಮ್ಮ ಮೊದಲ ಟೆಸ್ಟ್ ಆಡಿದ ಬಳಿಕ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆಯಲಿವೆ. 

loader