2017ರ ಹಾಕಿ ಇಂಡಿಯಾ ಲೀಗ್ (ಎಚ್‌'ಐಎಲ್) ನಂತರ ಪ್ರಮುಖ ಆಟಗಾರರ ಸಮರ್ಥ ತಂಡವೊಂದರನ್ನು ಸಿದ್ಧಪಡಿಸುವ ಆಲೋಚನೆಯಿದೆ. ಆದರೆ, ಅದು ವಿಶ್ವಕಪ್, ಎಚ್‌'ಐಎಲ್‌'ನಲ್ಲಿನ ಪ್ರದರ್ಶನದ ಮೇಲೆ ಅವಲಂಬಿತ.- ರೋಲೆಂಟ್ ಓಲ್ಟ್‌ಮನ್ಸ್
ನವದೆಹಲಿ(ಡಿ.06): ಕಿರಿಯರ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡದ ಆಟಗಾರರಿಗೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಭವಿಷ್ಯದಲ್ಲಿ ಸುವರ್ಣಾವಕಾಶಗಳು ಒದಗಿ ಬರಲಿವೆ ಎಂದು ಹಿರಿಯರ ಹಾಕಿ ತಂಡದ ಪ್ರಧಾನ ಕೋಚ್ ರೋಲೆಂಟ್ ಓಲ್ಟ್ಮನ್ಸ್ ಕಿವಿಮಾತು ಹೇಳಿದ್ದಾರೆ.
ಟೂರ್ನಿಯಲ್ಲಿ ನೀಡುವ ಪ್ರದರ್ಶನ ಹಿರಿಯರ ತಂಡಕ್ಕೆ ಸೇರ್ಪಡೆಗೊಳ್ಳುವ ಉತ್ತಮ ಅವಕಾಶವನ್ನು ಒದಗಿಸಿಕೊಡಲಿದೆ. ಆಟದ ಮೇಲೆ ಆಟಗಾರರು ಹೆಚ್ಚು ಗಮನ ನೀಡಬೇಕೆಂದು ಭಾರತೀಯ ಕಿರಿಯರ ತಂಡವನ್ನು ಭೇಟಿ ಮಾಡಿದ ಓಲ್ಟ್ಮನ್ಸ್ ಹೇಳಿದ್ದಾರೆ
ಇದೇವೇಳೆ ಅವರು, ‘‘2017ರ ಹಾಕಿ ಇಂಡಿಯಾ ಲೀಗ್ (ಎಚ್'ಐಎಲ್) ನಂತರ ಪ್ರಮುಖ ಆಟಗಾರರ ಸಮರ್ಥ ತಂಡವೊಂದರನ್ನು ಸಿದ್ಧಪಡಿಸುವ ಆಲೋಚನೆಯಿದೆ. ಆದರೆ, ಅದು ವಿಶ್ವಕಪ್, ಎಚ್'ಐಎಲ್'ನಲ್ಲಿನ ಪ್ರದರ್ಶನದ ಮೇಲೆ ಅವಲಂಬಿತ’’ ಎಂದು ತಿಳಿಸಿದರು.
