ಭಾರತ ತಂಡ ಪಾಕ್ ವಿರುದ್ಧ ಸತತ ಎರಡನೇ ಗೆಲುವು ಇದಾಗಿದೆ. ಇದೇ ಟೂರ್ನಿಯ ಲೀಗ್'ನಲ್ಲಿ ಪಾಕ್ ವಿರುದ್ಧ ಭಾರತ ಮೇಲುಗೈ ಸಾಧಿಸಿತ್ತು.
ಮಲೇಷ್ಯಾ(ಅ. 31): ಭಾರತ ಹಾಕಿ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯನ್ನು ಗೆದ್ದುಕೊಂಡಿದೆ. ಇಂದು ನಡೆದ ಫೈನಲ್'ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 3-2 ಗೋಲುಗಳಿಂದ ರೋಚಕ ಗೆಲುವು ಪಡೆದಿದೆ. ರೂಪೀಂದರ್ ಪಾಲ್ ಸಿಂಗ್ ಸರ್ದಾರ್ ಸಿಂಗ್ ಮತ್ತು ನಿಕಿನ್ ತಿಮ್ಮಯ್ಯ ಗೋಲು ಗಳಿಸಿದರು. ಕೊಡಗಿನ ಕುವರ ನಿಕಿನ್ ತಿಮ್ಮಯ್ಯ ವಿಜಯದ ಗೋಲು ದಾಖಲಿಸಿದರು.
ಭಾರತ ತಂಡ ಪಾಕ್ ವಿರುದ್ಧ ಸತತ ಎರಡನೇ ಗೆಲುವು ಇದಾಗಿದೆ. ಇದೇ ಟೂರ್ನಿಯ ಲೀಗ್'ನಲ್ಲಿ ಪಾಕ್ ವಿರುದ್ಧ ಭಾರತ ಮೇಲುಗೈ ಸಾಧಿಸಿತ್ತು.