ಇಂಟರ್‌ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಕೀನ್ಯಾ ತಂಡವನ್ನ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ರೋಚಕ ಫೈನಲ್ ಹಣಾಹಣಿಯಲ್ಲಿ ಭಾರತ 2-0 ಅಂತರದಲ್ಲಿ ಕೀನ್ಯಾ ತಂಡವನ್ನ ಮಣಿಸಿತು. 

ಮಂಬೈ(ಜೂನ್.10): ಇಂಟರ್‌ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮುಂಬೈನ ಫುಟ್ಬಾಲ್ ಅರೀನಾ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ, ಬಲಿಷ್ಠ ಕೀನ್ಯಾ ತಂಡವನ್ನ 2-0 ಅಂತರದಲ್ಲಿ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Scroll to load tweet…

ರೋಚಕ ಫೈನಲ್ ಪಂದ್ಯದಲ್ಲಿ ಭಾರತಕ್ಕ ಸುನಿಲ್ ಚೆಟ್ರಿ 8ನೇ ನಿಮಿಷದಲ್ಲಿ ಮೊದಲ ಗೋಲು ಸಿಡಿಸೋ ಮೂಲಕ ಖಾತೆ ತೆರೆದರು. ಚೆಟ್ರಿ ಗೋಲಿನ ನೆರವಿನಿಂದ ಭಾರತ ಆರಂಭದಲ್ಲೇ 1-0 ಮುನ್ನಡೆ ಸಾಧಿಸಿತು. 

ತಿರುಗೇಟು ನೀಡಲು ಕೀನ್ಯಾ ಸತತ ಪ್ರಯತ್ನ ನಡೆಸಿತು. ಆಕ್ರಮಣಕಾರಿ ಆಟಕ್ಕೆ ಮುಂದಾದ ಕೀನ್ಯಾ ತಂಡವನ್ನ ಭಾರತೀಯ ಢಿಪೆಂಡರ್‌ಗಳು ಸಮರ್ಥವಾಗಿ ತಡೆದರು. 29ನೇ ನಿಮಿಷದಲ್ಲಿ ಮತ್ತೆ ಸುನಿಲ್ ಚೆಟ್ರಿ ಗೋಲು ಸಿಡಿಸಿ ಭಾರತಕ್ಕೆ 2-0 ಮುನ್ನಡೆ ತಂದುಕೊಟ್ಟರು. 

ಒಟ್ಟು 64 ಗೋಲು ಸಿಡಿಸಿದ ಸುನಿಲ್ ಚೆಟ್ರಿ , ಅರ್ಜೆಂಟೀನಾದ ಸ್ಟಾರ್ ಪ್ಲೇಯರ್ ಲಿಯೋನಲ್ ಮೆಸ್ಸಿ ದಾಖಲೆ ಸರಿಗಟ್ಟಿದರು. ಇಷ್ಟೇ ಅಲ್ಲ ಟೂರ್ನಿಯೊಂದರಲ್ಲೇ 8 ಗೋಲು ಸಿಡಿಸಿ ಭಾರತದ ಪರ ಗರಿಷ್ಠ ಗೋಲು ಸಿಡಿಸಿದ ದಾಖಲೆ ಬರೆದರು.

ದ್ವಿತಿಯಾರ್ಧದಲ್ಲಿ ಭಾರತ ಎಚ್ಚರಿಕೆಯ ಆಟಕ್ಕೆ ಮುಂದಾಯಿತು. ಆದರೆ ಕೀನ್ಯಾ ಗೋಲಿಗಾಗಿ ಕಠಿಣ ಹೋರಾಟ ನಡೆಸಿತು. ಅಂತ್ಯದಲ್ಲಿ ಭಾರತ 2-0 ಅಂತರದಿಂದ ಕೀನ್ಯಾ ತಂಡವನ್ನ ಸೋಲಿಸಿ ಪ್ರಶಸ್ತಿ ಬಾಚಿಕೊಂಡಿತು.