ಕೊಹ್ಲಿ ಪಡೆ ಈ ಗೆಲುವಿನ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು. ಸರಣಿಯ ಮೂರನೇ ಪಂದ್ಯವು ನ. 26ರಿಂದ ಮೊಹಾಲಿಯಲ್ಲಿ ನಡೆಯಲಿದೆ.​

ವಿಶಾಖಪಟ್ಟಣಂ(ನ. 21): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಜಯಭೇರಿ ಭಾರಿಸಿದೆ. ಟೀಮ್ ಇಂಡಿಯಾ 246 ರನ್'ಗಳಿಂದ ಗೆಲುವು ಪಡೆದಿದೆ. ಗೆಲ್ಲಲು 405 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸಲ್ಲಿ 158 ರನ್'ಗೆ ಆಲೌಟ್ ಆಗುವ ಮೂಲಕ ಸೋಲಿಗೆ ಶರಣಾಯಿತು. ಕೊಹ್ಲಿ ಪಡೆ ಈ ಗೆಲುವಿನ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು.

ನಿನ್ನೆಯ ದಿನಾಂತ್ಯದಲ್ಲಿ 2 ವಿಕೆಟ್'ಗೆ 87 ರನ್ ಗಳಿಸಿದ್ದ ಇಂಗ್ಲೆಂಡ್'ನ ಆಟ ಇಂದು ಹೆಚ್ಚು ಮುಂದುವರಿಯಲಿಲ್ಲ. ಬ್ಯಾಟ್ ಮಾಡಲು ಕಷ್ಟಕರವಾದ ಪಿಚ್'ನಲ್ಲಿ ಭಾರತೀಯ ಸ್ಪಿನ್ನರ್'ಗಳು ವಿಜೃಂಬಿಸಿದರು. ಇಂದು ಜಾನಿ ಬೇರ್'ಸ್ಟೋ ಹೊರತುಪಡಿಸಿ ಉಳಿದವರಾರು ಎರಡಂಕಿ ಮೊತ್ತದ ಗಡಿ ದಾಟಲಿಲ್ಲ.

ಭಾರತದ ಪರ ಅಶ್ವಿನ್ ಮತ್ತು ಜಯಂತ್ ತಲಾ 3 ವಿಕೆಟ್ ಪಡೆದರು. ಜಡೇಜಾ ಮತ್ತು ಮೊಹಮ್ಮದ್ ಶಮಿ ತಲಾ 2 ವಿಕೆಟ್ ಪಡೆದರು. ಜಡೇಜಾ 34 ಓವರ್ ಬೌಲ್ ಮಾಡಿ ಕೇವಲ 35 ರನ್ ನೀಡಿದ್ದು ವಿಶೇಷ. ಅಶ್ವಿನ್ ಈ ಪಂದ್ಯದಲ್ಲಿ ಒಟ್ಟು 8 ವಿಕೆಟ್ ಕಬಳಿಸಿ ಗೆಲುವಿನ ರೂವಾರಿ ಎನಿಸಿದರು.

ಇನ್ನು, ಸರಣಿಯ ಮೂರನೇ ಪಂದ್ಯವು ನ. 26ರಿಂದ ಮೊಹಾಲಿಯಲ್ಲಿ ನಡೆಯಲಿದೆ.

ಸ್ಕೋರು ವಿವರ:

ಭಾರತ ಮೊದಲ ಇನ್ನಿಂಗ್ಸ್ 129.4 ಓವರ್ 455 ರನ್ ಆಲೌಟ್
(ವಿರಾಟ್ ಕೊಹ್ಲಿ 167, ಚೇತೇಶ್ವರ್ ಪೂಜಾರ 119, ಆರ್.ಅಶ್ವಿನ್ 58, ಜಯಂತ್ ಯಾದವ್ 35, ಅಜಿಂಕ್ಯ ರಹಾನೆ 23 ರನ್ - ಜೇಮ್ಸ್ ಆಂಡರ್ಸನ್ 62/3, ಮೊಯೀನ್ ಅಲಿ 98/3, ಅದಿಲ್ ರಷೀದ್ 110/2)

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 102.5 ಓವರ್ 255 ರನ್ ಆಲೌಟ್
(ಬೆನ್ ಸ್ಟೋಕ್ಸ್ 70, ಜಾನಿ ಬೇರ್'ಸ್ಟೋ 53, ಜೋ ರೂಟ್ 53, ಅದಿಲ್ ರಷೀದ್ 32 ರನ್ - ಆರ್.ಅಶ್ವಿನ್ 67/5)

ಭಾರತ ಎರಡನೇ ಇನ್ನಿಂಗ್ಸ್ 63.1 ಓವರ್ 204 ರನ್ ಆಲೌಟ್
(ವಿರಾಟ್ ಕೊಹ್ಲಿ 81, ಜಯಂತ್ ಯಾದವ್ ಅಜೇಯ 27, ಅಜಿಂಕ್ಯ ರಹಾನೆ 26 ರನ್ - ಸ್ಟುವರ್ಟ್ ಬ್ರಾಡ್ 33/4, ಅದಿಲ್ ರಷೀದ್ 82/4)

ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 97.3 ಓವರ್ 158 ರನ್ ಆಲೌಟ್
(ಅಲಸ್ಟೇರ್ ಕುಕ್ 54, ಜಾನಿ ಬೇರ್'ಸ್ಟೋ 34, ಹಸೀಬ್ ಹಮೀದ್ 25, ಜೋ ರೂಟ್ 25 ರನ್ - ಆರ್.ಅಶ್ವಿನ್ 52/3, ಜಯಂತ್ ಯಾದವ್ 30/3, ಮೊಹಮ್ಮದ್ ಶಮಿ 30/2, ರವೀಂದ್ರ ಜಡೇಜಾ 35/2)