ಶನಿವಾರ ನಡೆಯಲಿರುವ ತನ್ನ ನಾಲ್ಕನೇ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಭಾರತ ಸೆಣಸಲಿದೆ. ಈ ಪಂದ್ಯವನ್ನು ಗೆದ್ದರೆ ಭಾರತ ಸೆಮಿಫೈನಲ್ ಪ್ರವೇಶಿಸಬಹುದು.
ಅಹ್ಮದಾಬಾದ್(ಅ. 12): ಪ್ರಸಕ್ತ ವಿಶ್ವಕಪ್'ನಲ್ಲಿ ಭಾರತದ ಸೆಮಿಫೈನಲ್ ಆಸೆ ಜೀವಂತವಾಗಿದೆ. ನಿನ್ನೆ ರಾತ್ರಿ ನಡೆದ ಗ್ರೂಪ್ ಎ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 57-20ರಿಂದ ಸುಲಭ ಗೆಲುವು ಸಾಧಿಸಿತು. ಅಜಯ್ ಠಾಕೂರ್ 10 ಪಾಯಿಂಟ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರದೀಪ್ ನರ್ವಾಲ್ 8 ಪಾಯಿಂಟ್ ಗಳಿಸಿದರು.
ಈ ವಿಶ್ವಕಪ್'ನಲ್ಲಿ ಭಾರತಕ್ಕಿದು ಎರಡನೇ ಗೆಲುವಾಗಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಸೋಲಿನ ಶಾಕ್ ಅನುಭವಿಸಿದ್ದ ಭಾರತ ತನ್ನ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿತ್ತು. ಶನಿವಾರ ನಡೆಯಲಿರುವ ತನ್ನ ನಾಲ್ಕನೇ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಭಾರತ ಸೆಣಸಲಿದೆ. ಈ ಪಂದ್ಯವನ್ನು ಗೆದ್ದರೆ ಭಾರತ ಸೆಮಿಫೈನಲ್ ಪ್ರವೇಶಿಸುತ್ತದೆ. ಇನ್ನೊಂದೆಡೆ, ನಾಳೆ ಗುರುವಾರ ಎ ಗುಂಪಿನಲ್ಲಿ ಮಹತ್ವದ ಪಂದ್ಯದ ನಡೆಯಲಿದೆ. ಅಂದು ಬಾಂಗ್ಲಾದೇಶ ಹಾಗೂ ದಕ್ಷಿಣ ಕೊರಿಯಾ ತಂಡಗಳು ಮುಖಾಮುಖಿಯಾಗಲಿವೆ. ಆ ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದದ್ದೇ ಅದಲ್ಲಿ ಗುಂಪಿನಲ್ಲಿ ಸೆಮಿಫೈನಲ್ ಸ್ಥಾನಕ್ಕೆ ರೋಚಕ ಪೈಪೋಟಿ ನಡೆಯಲಿದೆ.
