Asianet Suvarna News Asianet Suvarna News

ಫೈನಲ್'ನಲ್ಲಿ ಮುಗ್ಗರಿಸಿದ ಕರ್ನಾಟಕ, ಟ್ರೋಫಿ ಮುಡಿಗೇರಿಸಿಕೊಂಡ ಇಂಡಿಯಾ ಬಿ: ವ್ಯರ್ಥವಾದ ಸಮರ್ಥ್ ಶತಕ

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಕರಣ್ ನಾಯರ್ ಪಡೆ 9 ಓವರ್'ಗಳಾಗುವಷ್ಟರಲ್ಲಿಯೇ 2 ವಿಕೇಟ್ ಕಳೆದುಕೊಂಡಿತು. ಸ್ಫೋಟಕ ಆಟಗಾರ ಮಾಯಾಂಕ್ ಅಗರ್'ವಾಲ್ 14 ರನ್ ಗಳಿಸಿ ರನ್ ಔಟ್ ಆದರೆ ಕರಣ್ 10 ರನ್'ಗೆ ಪೆವಿಲಿಯನ್'ಗೆ ತೆರಳಿದರು.

India B the DEODHAR TROPHY TITLE

ಧರ್ಮಶಾಲಾ(ಮಾ.08): ಸತತ ಗೆಲುವುಗಳನ್ನು ಕಂಡಿದ್ದ ಕರ್ನಾಟಕ ತಂಡ ದೇವಧರ್ ಟ್ರೋಫಿ'ಯ ಫೈನಲ್ ಪಂದ್ಯದಲ್ಲಿ ಭಾರತ ಬಿ ತಂಡಕ್ಕೆ 6 ವಿಕೇಟ್'ಗಳಿಂದ ಶರಣಾಯಿತು.

ಕರ್ನಾಟಕ ನೀಡಿದ್ದ 279 ರನ್'ಗಳ ಗುರಿಯನ್ನು ಗಾಯಕ್'ವಾಡ್ (58), ಈಶ್ವರನ್(69), ಶ್ರೇಯಸ್ ಅಯ್ಯರ್(61) ಹಾಗೂ ಮನೋಜ್ ತಿವಾರಿ ಅಜೇಯ (59) ಅರ್ಧ ಶತಕಗಳ ನೆರವಿನಿಂದ 48.2 ಓವರ್'ಗಳಲ್ಲಿ 281/4 ವಿಜಯ ಸಾಧಿಸಿದರು. ರಾಜ್ಯದ ಬೌಲರ್'ಗಳ್ಯಾರು ಭಾರತ ಬಿ ತಂಡದ ಆಟಗಾರರನ್ನು ಕಟ್ಟಿ ಹಾಕುವಲ್ಲಿ ಸಾಧ್ಯವಾಗಲಿಲ್ಲ. ಕರ್ನಾಟಕದ ಪರ ಶ್ರೇಯಸ್ ಗೋಪಾಲ್ ಮಾತ್ರ 55/2 ವಿಕೇಟ್ ಪಡೆದು ಯಶಸ್ವಿ ಬೈಲರ್ ಎನಿಸಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಕರಣ್ ನಾಯರ್ ಪಡೆ 9 ಓವರ್'ಗಳಾಗುವಷ್ಟರಲ್ಲಿಯೇ 2 ವಿಕೇಟ್ ಕಳೆದುಕೊಂಡಿತು. ಸ್ಫೋಟಕ ಆಟಗಾರ ಮಾಯಾಂಕ್ ಅಗರ್'ವಾಲ್ 14 ರನ್ ಗಳಿಸಿ ರನ್ ಔಟ್ ಆದರೆ ಕರಣ್ 10 ರನ್'ಗೆ ಪೆವಿಲಿಯನ್'ಗೆ ತೆರಳಿದರು.

ಮಧ್ಯಮ ಕ್ರಮಾಂಕದ ಆಟಗಾರರಾದ ದೇಶಪಾಂಡೆ, ಬಿನ್ನಿ ಕೂಡ  ಬಂದ ದಾರಿಯಲ್ಲಿಯೇ ಔಟಾದರು. 5 ವಿಕೇಟ್'ಗೆ ಆರ್. ಸಮರ್ಥ್ ಹಾಗೂ ವಿಕೇಟ್ ಕೀಪರ್ ಸಿ.ಎಂ.ಗೌತಮ್ (76) 132 ರನ್'ಗಳ ಜೊತೆಯಾಟದ ನೆರವಿನಿಂದ  ತಂಡ 50 ಓವರ್'ಗಳಲ್ಲಿ 279 ರನ್ ಗಳಿಸಲು ಸಾಧ್ಯವಾಯಿತು. ಸಮರ್ಥ್ 120 ಚಂಡುಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸ್'ರ್'ನೊಂದಿಗೆ ಶತಕ (107) ಬಾರಿಸಿದರು. ಭಾರತ ಬಿ ಪರ ಕೆಕೆ ಅಹಮದ್ 49/3, ಉಮೇಶ್ ಯಾದವ್ 48/2 ವಿಕೇಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.

ಸ್ಕೋರ್

ಕರ್ನಾಟಕ 50 ಓವರ್'ಗಳಲ್ಲಿ 279/8

(ಆರ್.ಸಮರ್ಥ್ 107, ಗೌತಮ್  76 )

ಭಾರತ ಬಿ 48.2 ಓವರ್'ಗಳಲ್ಲಿ 281/4

(ಗಾಯಕ್'ವಾಡ್ 58, ಈಶ್ವರನ್ 69, ಎಸ್.ಅಯ್ಯರ್ 61, ತಿವಾರಿ 59)

ಫಲಿತಾಂಶ: ಭಾರತ ಬಿ 6 ವಿಕೇಟ್'ಗಳ ಜಯ

ಪಂದ್ಯ ಶ್ರೇಷ್ಠ: ಆರ್. ಸಮರ್ಥ್    

Follow Us:
Download App:
  • android
  • ios