ನೈಟ್'ವಾಚ್'ಮನ್ ಆಗಿ ಕ್ರೀಸ್'ಗಿಳಿದಿದ್ದ ರವಿಚಂದ್ರನ್ ಅಶ್ವಿನ್ ಅರ್ಧಶತಕ(58) ಬಾರಿಸುವಲ್ಲಿ ಯಶಸ್ವಿಯಾದರು.

ವಿಶಾಖಪಟ್ಟನಂ(ನ.18): ಆಂಗ್ಲರ ವಿರುದ್ಧ ಮೊದಲ ದಿನ ದಿಟ್ಟ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಎರಡನೇ ದಿನ ದಿಢೀರ್ ಕುಸಿತ ಕಾಣುವ ಮೂಲಕ ನಿರಾಸೆ ಮೂಡಿಸಿತು.

ಮೊದಲ ದಿನ ಪ್ರಥಮ ಇನಿಂಗ್ಸ್'ನಲ್ಲಿ ಟೀಂ ಇಂಡಿಯಾ 317 ರನ್'ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸುಭದ್ರ ಸ್ಥಿತಿಯಲ್ಲಿತ್ತು. ಆದರೆ ಎರಡನೇ ದಿನ 455 ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಭಾರೀ ಮೊತ್ತ ಗಳಿಸುವ ಅವಕಾಶವನ್ನು ಕೈಚೆಲ್ಲಿತು. 151 ಗಳಿಸಿ ಅಜೇಯರಾಗುಳಿದಿದ್ದ ನಾಯಕ ವಿರಾಟ್ ಕೊಹ್ಲಿ 167 ಗಳಿಸಿ ಅಲಿಗೆ ವಿಕೆಟ್ ಒಪ್ಪಿಸಿದರು. ಇನ್ನು ನೈಟ್'ವಾಚ್'ಮನ್ ಆಗಿ ಕ್ರೀಸ್'ಗಿಳಿದಿದ್ದ ರವಿಚಂದ್ರನ್ ಅಶ್ವಿನ್ ಅರ್ಧಶತಕ(58) ಬಾರಿಸುವಲ್ಲಿ ಯಶಸ್ವಿಯಾದರು.

ಕೆಳಕ್ರಮಾಂಕದಲ್ಲಿ ಜಯಂತ್ ಯಾದವ್(35), ಅಶ್ವಿನ್'ಗೆ ಸೂಕ್ತ ಬೆಂಬಲ ನೀಡಿದ್ದರಿಂದ ತಂಡ 400 ಗಡಿ ದಾಟುವಲ್ಲಿ ಯಶಸ್ವಿಯಾಯಿತು.

ಸಂಕ್ಷಿಪ್ತ ಸ್ಕೋರ್;

ಭಾರತ ಮೊದಲ ಇನಿಂಗ್ಸ್: 455/10 129.4 ಓವರ್

ವಿರಾಟ್ ಕೊಹ್ಲಿ 167, ಚೇತೇಶ್ವರ ಪೂಜಾರ 119

ಜೇಮ್ಸ್ ಆ್ಯಂಡರ್'ಸನ್ 62/3