ಈ ಮೂಲಕ ಭಾರತ ತಂಡ 900 ಪಂದ್ಯಗಳನ್ನಾಡಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಡಿರುವ 899 ಪಂದ್ಯಗಳಲ್ಲಿ 454ರಲ್ಲಿ ಜಯಗಳಿಸಿದ್ದು 399ರಲ್ಲಿ ಸೋತಿದೆ.
ಧರ್ಮಶಾಲಾ(ಅ.15): ನ್ಯೂಜಿಲೆಂಡ್ ವಿರುದ್ಧ ನಾಳೆ ನಡೆಯಲಿರುವ ಮೊದಲ ಪಂದ್ಯ ಭಾರತದ ಪಾಲಿಗೆ ಐತಿಹಾಸಿಕ ಪಂದ್ಯವಾಗಲಿದೆ.
ಮೊನ್ನೆ ತಾನೇ ಕಿವೀಸ್ ವಿರುದ್ಧ 500ನೇ ಟೆಸ್ಟ್ ಪಂದ್ಯವಾಡಿದ ಭಾರತ, ಇದೇ ಕಿವೀಸ್ ವಿರುದ್ಧ ತವರಿನಲ್ಲಿ 250ನೇ ಪಂದ್ಯವಾಡಿದ ಹೆಗ್ಗಳಿಕೆ ಪಾತ್ರವಾಗಿತ್ತು.
ಈಗ ಮತ್ತೊಂದು ಮೈಲಿಗಲ್ಲು ನಿರ್ಮಿಸಲು ಟೀಮ್ ಇಂಡಿಯಾ ಮುಂದಾಗಿದ್ದು, ನಾಳೆ ನಡೆಯಲಿರುವ ಪಂದ್ಯ ಭಾರತದ 900ನೇ ಪಂದ್ಯವಾಗಲಿದೆ.
ಈ ಮೂಲಕ ಭಾರತ ತಂಡ 900 ಪಂದ್ಯಗಳನ್ನಾಡಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಡಿರುವ 899 ಪಂದ್ಯಗಳಲ್ಲಿ 454ರಲ್ಲಿ ಜಯಗಳಿಸಿದ್ದು 399ರಲ್ಲಿ ಸೋತಿದೆ.
7 ಪಂದ್ಯ ಟೈ ಆಗಿದ್ರೆ 39 ಪಂದ್ಯಗಳು ರದ್ದಾಗಿವೆ. ಸದ್ಯ ನಾಳಿನ ಪಂದ್ಯ ಗೆದ್ದು ಐತಿಹಾಸಿಕ ಪಂದ್ಯವನ್ನ ಅವಿಸ್ಮರಿಣಿಯನ್ನಅಗಿಸಲು ಭಾರತ ತಂಡ ಸಜ್ಜಾಗಿದೆ.