ಗರಿಷ್ಠ ವಿಕೆಟ್ ಪತನದಲ್ಲಿ ದಾಖಲೆ ಬರೆದ ಭಾರತ-ಅಫ್ಘಾನ್ ಟೆಸ್ಟ್
ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ವಿನೂತನ ದಾಖಲೆ ರಚನೆಯಾಗಿದೆ. ಭಾತದ ಬೌಲಿಂಗ್ ದಾಳಿಗೆ ನಲುಗಿದ ಅಫ್ಘಾನಿಸ್ತಾನ ಪೆವಿಲಿಯನ್ ಪರೇಡ್ ನಡೆಸುತ್ತಿದೆ. ಭಾರತದ ಅದ್ಬುತ ದಾಳಿಗೆ ನಿರ್ಮಾಣವಾದ ದಾಖಲೆ ಏನು?
ಬೆಂಗಳೂರು(ಜೂ.15): ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ವಿಶೇಷ ದಾಖಲೆಯೊಂದು ನಿರ್ಮಾಣವಾಗಿದೆ. ಏಷ್ಯಾದಲ್ಲಿ ಒಂದೇ ದಿನ ಗರಿಷ್ಠ ವಿಕೆಟ್ ಪತನದ ಪಟ್ಟಿಯಲ್ಲಿ ಭಾರತ ಹಾಗೂ ಆಫ್ಘಾನಿಸ್ತಾನ ಟೆಸ್ಟ್ ಮೊದಲ ಸ್ಥಾನ ಪಡೆದಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ-ಆಫ್ಘಾನಿಸ್ತಾನ ಟೆಸ್ಟ್ ಪಂದ್ಯದ ದ್ವಿತೀಯ ದಿನ ಬರೋಬ್ಬರಿ 24 ವಿಕೆಟ್ ಪತನಗೊಂಡಿದೆ. ದ್ವಿತೀಯ ದಿನದ ಆರಂಭದಲ್ಲಿ ಭಾರತ ಅಂತಿಮ 4 ವಿಕೆಟ್ ಕಳೆದುಕೊಂಡಿತು. ಇನ್ನು ಆಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ ಆಲೌಟ್ ಆಯಿತು. ಇನ್ನು ಫಾಲೋ ಆನ್ ಪಡೆದು ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನ್ ಮತ್ತೆ ಆಲೌಟ್ ಆಗೋ ಮೂಲಕ ಒಂದೇ ದಿನ ಓಟ್ಟು 24 ವಿಕೆಟ್ ಕಳೆದುಕೊಂಡಿದೆ.
ಇಂಡೋ-ಅಫ್ಘಾನ್ ಏಷ್ಯಾದಲ್ಲಿ ಗರಿಷ್ಠ ವಿಕೆಟ್ ಪತನವಾದ ಪಂದ್ಯವಾಗಿದೆ. ಇದಕ್ಕೂ ಮೊದಲು 2001ರಲ್ಲಿ ಕೊಲೊಂಬೊದಲ್ಲಿ ನಡೆದ ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ 3ನೇ ದಿನ 22 ವಿಕೆಟ್ ಪತನಗೊಂಡಿತ್ತು.
ಒಂದೇ ದಿನದಾಟದಲ್ಲಿ ಗರಿಷ್ಠ ವಿಕೆಟ್ ಪತನ(ಏಷ್ಯಾ)
ಪಂದ್ಯ | ವಿಕೆಟ್ | ದಿನದಾಟ | ವರ್ಷ |
ಭಾರತ-ಅಫ್ಘಾನಿಸ್ತಾನ | 24 | 2 | 2018 |
ಶ್ರೀಲಂಕ-ಇಂಗ್ಲೆಂಡ್ | 22 | 3 | 2001 |
ಶ್ರೀಲಂಕಾ-ಆಸ್ಟ್ರೇಲಿಯಾ | 21 | 2 | 2016 |
ಏಷ್ಯಾ ಮಾತ್ರವಲ್ಲ, ಭಾರತದದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲೂ ಗರಿಷ್ಠ ವಿಕೆಟ್ ಪತನವಾದ ಪಂದ್ಯವಾಗಿ ಮಾರ್ಪಟ್ಟಿದೆ.
ಒಂದೇ ದಿನದಾಟದಲ್ಲಿ ಗರಿಷ್ಠ ವಿಕೆಟ್ ಪತನ(ಭಾರತ)
ಪಂದ್ಯ | ವಿಕೆಟ್ | ದಿನದಾಟ | ವರ್ಷ |
ಭಾರತ-ಅಫ್ಘಾನ್ | 24 | 2 | 2018 |
ಭಾರತ-ಆಸ್ಟ್ರೇಲಿಯಾ | 20 | 3 | 2004 |
ಭಾರತ--ಸೌತ್ಆಫ್ರಿಕಾ | 20 | 2 | 2015 |