ವಾಂಗೇರಿ(ಡಿ.04): ಭಾರತ ‘ಎ’ ಮತ್ತು ನ್ಯೂಜಿಲೆಂಡ್‌ ‘ಎ’ ನಡುವಿನ 3ನೇ ಅನಧಿಕೃತ ಟೆಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. 

ಪಂದ್ಯದ 4ನೇ ಹಾಗೂ ಅಂತಿಮ ದಿನವಾದ ಸೋಮವಾರ ಮಳೆಯಿಂದಾಗಿ ಆಟ ನಡೆಯಲಿಲ್ಲ. ಹೀಗಾಗಿ ಪಂದ್ಯ ಡ್ರಾ ಆಯಿತು. ಮೊದಲೆರಡು ಟೆಸ್ಟ್‌ಗಳು ಸಹ ಡ್ರಾಗೊಂಡಿದ್ದವು. 

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 323 ರನ್‌ಗಳಿಗೆ ಆಲೌಟ್‌ ಆದ ಬಳಿಕ ನ್ಯೂಜಿಲೆಂಡ್‌ 398 ರನ್‌ ಗಳಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಭಾರತ ‘ಎ’ 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 38 ರನ್‌ ಗಳಿಸಿತ್ತು.

ಸ್ಕೋರ್‌:

ಭಾರತ ‘ಎ’ 323/10 ಹಾಗೂ 38/1,

ನ್ಯೂಜಿಲೆಂಡ್‌ ‘ಎ’ 398/10