ಔಟಾಗದೆ ಉಳಿದಿದ್ದ ಪ್ರಿಯಾಂಕ್ ಮತ್ತು ಶ್ರೇಯಸ್, ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಪೂರೈಸಿದರೆ, ಕೆಳ ಕ್ರಮಾಂಕದಲ್ಲಿ ತಮಿಳುನಾಡಿನ ಶಂಕರ್ ಬಿರುಸಿನ ಬ್ಯಾಟಿಂಗ್ ನಡೆಸಿ ಅಜೇಯರಾದರು.
ಹೈದರಾಬಾದ್(ಫೆ.06): ಆರಂಭಿಕ ಪ್ರಿಯಾಂಕ್ ಪಾಂಚಲ್ (103) ಹಾಗೂ ಮೂರನೇ ಕ್ರಮಾಂಕಿತ ಆಟಗಾರ ಶ್ರೇಯಸ್ ಅಯ್ಯರ್ (100) ಹಾಗೂ ಕೆಳ ಕ್ರಮಾಂಕದಲ್ಲಿ ವಿಜಯ್ ಶಂಕರ್ (103) ಸಿಡಿಸಿದ ಭರ್ಜರಿ ಶತಕದಿಂದ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ‘ಎ’ ತಂಡ ಮೇಲುಗೈ ಮೆರೆಯಿತು.
ಇಲ್ಲಿನ ಜಿಮ್ಖಾನ ಮೈದಾನದಲ್ಲಿ ಸೋಮವಾರ ಮುಕ್ತಾಯ ಕಂಡ ಎರಡು ದಿನಗಳ ಅಭ್ಯಾಸ ಪಂದ್ಯವು ಡ್ರಾನಲ್ಲಿ ಅಂತ್ಯ ಕಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 224 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡ ಬಾಂಗ್ಲಾದೇಶ ವಿರುದ್ಧ ಭಾನುವಾರದ ಅಂತ್ಯಕ್ಕೆ 1 ವಿಕೆಟ್‌ಗೆ 91 ರನ್ ಗಳಿಸಿದ್ದ ಭಾರತ ‘ಎ’ ತಂಡ, 90 ಓವರ್‌ಗಳಲ್ಲಿ 8 ವಿಕೆಟ್‌ಗೆ 461 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು. 40 ಮತ್ತು 29 ರನ್ ಗಳಿಸಿ ಔಟಾಗದೆ ಉಳಿದಿದ್ದ ಪ್ರಿಯಾಂಕ್ ಮತ್ತು ಶ್ರೇಯಸ್, ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಪೂರೈಸಿದರೆ, ಕೆಳ ಕ್ರಮಾಂಕದಲ್ಲಿ ತಮಿಳುನಾಡಿನ ಶಂಕರ್ ಬಿರುಸಿನ ಬ್ಯಾಟಿಂಗ್ ನಡೆಸಿ ಅಜೇಯರಾದರು.
ಬಳಿಕ ಬ್ಯಾಟ್ ಮಾಡಿದ ಬಾಂಗ್ಲಾದೇಶ 15 ಓವರ್‌ಗಳಲ್ಲಿ 2 ವಿಕೆಟ್‌ಗೆ 73 ರನ್ ಗಳಿಸಿತು. ಆರಂಭಿಕ ತಮೀಮ್ ಇಕ್ಬಾಲ್ (42) ರನ್ ಗಳಿಸಿದರು.
