ಟ್ರಿನಿಡಾಡ್‌(ಆ.4): ವೆಸ್ಟ್ ಇಂಡೀಸ್ ವಿರುದ್ದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಶುಭಾರಂಭ ಮಾಡಿದ್ದರೆ, ಅತ್ತ ಭಾರತ ಎ ತಂಡ ಸರಣಿ ಗೆದ್ದುಕೊಂಡಿದೆ.  ವೆಸ್ಟ್‌ಇಂಡೀಸ್‌ ‘ಎ’ ವಿರುದ್ಧ 2ನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಭಾರತ ‘ಎ’ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 2-0 ಅಜೇಯ ಮುನ್ನಡೆ ಪಡೆದು, ಸರಣಿ ವಶಪಡಿಸಿಕೊಂಡಿದೆ. 

ಇದನ್ನೂ ಓದಿ: INDvWI:ಭಾರತದ ಬೌಲರ್ಸ್ ಕಮಾಲ್; 95 ರನ್‌ಗೆ ವಿಂಡೀಸ್ ಸುಸ್ತು!

ಮೊದಲ ಇನ್ನಿಂಗ್ಸಲ್ಲಿ 318 ರನ್‌ ಗಳಿಸಿದ್ದ ವಿಂಡೀಸ್‌, ಭಾರತವನ್ನು 190 ರನ್‌ಗೆ ಕಟ್ಟಿಹಾಕಿತ್ತು. 2ನೇ ಇನ್ನಿಂಗ್ಸಲ್ಲಿ 149 ರನ್‌ಗೆ ಆಲೌಟ್‌ ಆದ ವಿಂಡೀಸ್‌ ಭಾರತ ‘ಎ’ಗೆ 281 ರನ್‌ ಗುರಿ ನೀಡಿತ್ತು. ಮಯಾಂಕ್‌(81), ಪ್ರಿಯಾಂಕ್‌ (68), ಅಭಿಮನ್ಯು(62) ಅರ್ಧಶತಕಗಳ ನೆರವಿನಿಂದ ಭಾರತ ಸುಲಭ ಗೆಲುವು ಪಡೆಯಿತು.

ಸ್ಕೋರ್‌: ವಿಂಡೀಸ್‌ ‘ಎ’ 318, 149, ಭಾರತ ‘ಎ’ 190, 281/3