Asianet Suvarna News Asianet Suvarna News

INDvWI:ಭಾರತದ ಬೌಲರ್ಸ್ ಕಮಾಲ್; 95 ರನ್‌ಗೆ ವಿಂಡೀಸ್ ಸುಸ್ತು!

ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ವೆಸ್ಟ್ ಇಂಡೀಸ್ ತತ್ತರಿಸಿದೆ. ಕೀರನ್ ಪೊಲಾರ್ಡ್ ಏಕಾಂಗಿ ಹೋರಾಟ ನೀಡಿ ವೆಸ್ಟ್ ಇಂಡೀಸ್ ಮಾನ ಕಾಪಾಡಿದರು. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.

INDvWI Virat kohli boys restrict west indies by runs in 1st t20
Author
Bengaluru, First Published Aug 3, 2019, 9:39 PM IST

ಲೌಡರ್‌ಹಿಲ್(ಆ.03): ಚುಟುಕು ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ವೆಸ್ಟ್ ಇಂಡೀಸ್, ಟೀಂ ಇಂಡಿಯಾ ದಾಳಿಗೆ ತತ್ತರಿಸಿದೆ. ಫ್ಲೋರಿಡಾದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ 9 ವಿಕೆಟ್ ನಷ್ಟಕ್ಕೆ 95 ರನ್ ಸಿಡಿಸಿತು.   ನವದೀಪ್ ಸೈನಿ, ಭುವನೇಶ್ವರ್ ಕುಮಾರ್, ಖಲೀಲ್ ಅಹಮ್ಮದ್ ಹಾಗೂ ವಾಶಿಂಗ್ಟನ್ ಸುಂದರ್, ಕ್ರುನಾಲ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಕರಾರುವಕ್ ದಾಳಿಗೆ ವೆಸ್ಟ್ ಇಂಡೀಸ್ ಪರದಾಡಿತು. 

ಇದನ್ನೂ ಓದಿ: ಟಿ20ಯಲ್ಲಿ ಗರಿಷ್ಠ ಸಿಕ್ಸರ್‌: ದಾಖಲೆ ಹೊಸ್ತಿಲಲ್ಲಿ ರೋಹಿತ್‌

ಟಾಸ್ ಸೋತು ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕರು ಆಸರೆಯಾಗಲಿಲ್ಲ. ಜಾನ್ ಕ್ಯಾಂಬೆಲ್ ಹಾಗೂ ಇವಿನ್ ಲಿವಿಸ್ ಶೂನ್ಯಕ್ಕೆ ಔಟಾದರು. ನಿಕೋಲಸ್ ಪೂರ್ ಅಬ್ಬರಿಸೋ ಸೂಚನೆ ನೀಡಿದರೂ 20 ರನ್‌ಗೆ ಹೋರಾಟ ಅಂತ್ಯಗೊಂಡಿತು. ತಂಡದ ಜವಾಬ್ದಾರಿ ಹೊತ್ತ ಕೀರನ್ ಪೊಲಾರ್ಡ್ ವಿಕೆಟ್ ಉಳಿಸಿಕೊಳ್ಳೋ ಪ್ರಯತ್ನ ಮಾಡಿದರು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ.

ಶಿಮ್ರೊನ್ ಹೆಟ್ಮೆಯರ್ ಹಾಗೂ ರೊವ್ಮಾನ್ ಪೊವೆಲ್ ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. ನಾಯಕ  ಕಾರ್ಲೋಸ್ ಬ್ರಾಥ್ವೈಟ್ ಕೇವಲ 9 ರನ್ ಸಿಡಿಸಿ ನಿರ್ಗಮಿಸಿದರು. ಸುನಿಲ್ ನರೈನ್ ಹಾಗೂ ಕೀಮೊ ಪೌಲ್ ಆಸರೆಯಾಗಲಿಲ್ಲ. ಆದರೆ ಏಕಾಂಗಿ ಹೋರಾಟ ನೀಡಿದ ಕೀರನ್ ಪೊಲಾರ್ಡ್ 49 ರನ್ ಸಿಡಿಸಿ ಔಟಾದರು. ಈ ಮೂಲಕ ವಿಂಡೀಸ್ 9 ವಿಕೆಟ್ ನಷ್ಟಕ್ಕೆ 95 ರನ್ ಸಿಡಿಸಿತು. 

Follow Us:
Download App:
  • android
  • ios