ಫೆ.3 ರಂದು ಬೆಂಗಳೂರಿನಲ್ಲಿ ನಡೆಯುವ 3ನೇ ಪಂದ್ಯ ಉಭಯ ತಂಡಗಳಿಗೆ ಫೈನಲ್ ಪಂದ್ಯವಾಗಿ ಪರಿಣಮಿಸಿದೆ.
ನಾಗ್ಪುರದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 5 ರನ್'ಗಳ ರೋಚಕ ಜಯ ಗೆಲುವು ಸಾಧಿಸಿದ್ದು, ಮೂರು ಟಿ20 ಪಂದ್ಯಗಳ ಸರಣಿಯನ್ನು 1-1ರಲ್ಲಿ ಸಮಬಲ ಮಾಡಿಕೊಂಡಿದೆ. ಫೆ.3 ರಂದು ಬೆಂಗಳೂರಿನಲ್ಲಿ ನಡೆಯುವ 3ನೇ ಪಂದ್ಯ ಉಭಯ ತಂಡಗಳಿಗೆ ಫೈನಲ್ ಪಂದ್ಯವಾಗಿ ಪರಿಣಮಿಸಿದೆ.
ಮೊದಲು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಆರಂಭಿಕ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಮೊದಲ 4 ಓವರ್ನಲ್ಲಿ 30 ರನ್ ಬಾರಿಸಿದರು. ಆದರೆ ವಿರಾಟ್ 21 ರನ್ ಗಳಿಸಿದ್ದಾಗ ಕೊಹ್ಲಿ ಭರ್ಜರಿ ಹೊಡೆತಕ್ಕೈ ಕೈ ಹಾಕಿ ಜೋರ್ಡಾನ್'ಗೆ ವಿಕೆಟ್ ಒಪ್ಪಿಸಿದರು.
ಬಳಿಕ ಸುರೇಶ್ ರೈನಾ ಜೊತೆಯಾದ ರಾಹುಲ್ ತಂಡದ ಮೊತ್ತವನ್ನು 7 ಓವರ್'ಗಳಲ್ಲಿ 50ರ ಗಡಿ ದಾಟಿಸಿದರು. ರೈನಾ ಕೂಡ ಕ್ರೀಸ್'ನಲ್ಲಿ ಹೆಚ್ಚು ಹೊತ್ತು ನಿಲ್ಲದೆ ಕೇವಲ 7 ರನ್ ಗಳಿಸಿ ಔಟಾದರು. ನಂತರ ಆಟ ಆರಂಭಿಸಿದ ಯುವರಾಜ್ ಸಿಂಗ್ ಕೂಡ ಕೇವಲ 4 ರನ್ ಗಳಿಸಿ ಅಲಿಗೆ ಎಲ್'ಬಿ ಡಬ್ಲ್ಯು ಆದರು.
ನಂತರ ರಾಹುಲ್'ಗೆ ಜೊತೆಯಾದ ಮತ್ತೊಬ್ಬ ಕನ್ನಡಿಗ ಮನೀಶ್ ಪಾಂಡೆ ಎಚ್ಚರಿಕೆಯಿಂದ ಆಟವಾಡಿ 4ನೇ ವಿಕೆಟ್'ಗೆ 56 ರನ್ ಕಲೆ ಹಾಕಿದರು. ರಾಹುಲ್ 47 ಎಸೆತಗಳಲ್ಲಿ 2 ಸಿಕ್ಸರ್ 6 ಬೌಂಡರಿಗಳೊಂದಿಗೆ 71 ರನ್ ಬಾರಿಸಿದರೆ, ಪಾಂಡೆ 1 ಭರ್ಜರಿ ಸಿಕ್ಸ್'ರ್ ನೊಂದಿಗೆ 30 ರನ್ ಸಿಡಿಸಿದರು.
ಅನಂತರ ಭಾರತ 19 ರನ್ ಅಂತರದಲ್ಲಿ 5 ವಿಕೆಟ್ ಪತನವಾಗಿ 20 ಓವರ್'ಗಳಲ್ಲಿ 8 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ಇಂಗ್ಲೆಂಡ್ ಪರ ಜೋರ್ಡನ್ 3, ಅಲಿ, ಮಿಲ್ಸ್ ಹಾಗೂ ರಶೀದ್ ತಲಾ ಒಂದೊಂದು ವಿಕೆಟ್ ಪಡೆದರು. ಗೆಲುವಿಗೆ 145 ರನ್ ಬೆನ್ನಟ್ಟಿದ ಇಂಗ್ಲೆಂಡ್ ಮೊದಲ 3 ಓವರ್ನಲ್ಲಿ 22 ರನ್ ಹೊಡೆಯಿತು. ಆದರೆ ಸಾಮ್ ಬಿಲ್ಲಿಂಗ್ಸ್ ಹಾಗೂ ಜಾಸನ್ ರಾಯ್ ಅವರನ್ನು ಔಟ್ ಮಾಡಿದ ಆಶೀಶ್ ನೆಹ್ರಾ ಇಂಗ್ಲೆಂಡ್ಗೆ ಶಾಕ್ ನೀಡಿದರು. ತದ ನಂತರ ಜೋ ರೂಟ್ ಹಾಗೂ ಇಯಾನ್ ಮಾರ್ಗನ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡೋ ಮೂಲಕ ಭಾರತೀಯರನ್ನು ಕಾಡಿದರು.
ರೂಟ್, ಸ್ಟೋಕ್ಸ್ ಹಾಗೂ ಮಾರ್ಗನ್ ಒಂದು ಹಂತದಲ್ಲಿ ಭಾರತದ ಗೆಲುವನ್ನು ತಮ್ಮ ಕಡೆ ವಾಲಸಿಕೊಂಡಿದ್ದರು. ಆದರೆ ಕೊನೆಯ ಓವರ್'ನಲ್ಲಿ ಭಾರತದ ಗೆಲುವಿಗೆ 8 ರನ್ ಬೇಕಿತ್ತು. ಪಂದ್ಯ 2 ಕಡೆ ವಾಲಿದಾಗ ಜಸ್ಪ್ರೀತ್ ಬುಮ್ರಾ ಕೊನೆಯ ಓವರ್'ನಲ್ಲಿ ಕೇವಲ 2 ರನ್ ನೀಡಿ 2 ವಿಕೆಟ್ ಪಡೆದು ಭಾರತಕ್ಕೆ ಗೆಲುವು ದೊರಕಿಸಿ ಕೊಟ್ಟರು. ಈ ಜಯದೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲಗೊಂಡಿದೆ. ಬುಧವಾರ ಬೆಂಗಳೂರಿನಲ್ಲಿ ನಡೆಯುವ ಅಂತಿಮ ಪಂದ್ಯ ಫೈನಲ್ ಪಂದ್ಯವಾಗಲಿದೆ.
ಸ್ಕೋರ್
ಭಾರತ 144/8(20)
ಇಂಗ್ಲೆಂಡ್139/6(20)
ಪಂದ್ಯ ಪುರುಷೋತ್ತಮ : ಜಸ್ಪ್ರೀತ್ ಬುಮ್ರಾ
ಭಾರತಕ್ಕೆ 5 ರನ್ ರೋಚಕ ಜಯ
